ಕೋಲ್ಕೊತ್ತಾ: ಲವ್ವರ್ ಜೊತೆ ಸೇರಿ ಗಂಡನನ್ನೇ ಕೊಂದ ಮಹಿಳೆ ಬಳಿಕ ಮೃತದೇಹವನ್ನು ಬಾವಿಗೆಸೆದಿದ್ದಾಳೆ.ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಮಹಿಳೆ ಪ್ಲ್ಯಾನ್ ಮಾಡಿಕೊಂಡಿದ್ದಳು. ಅದರಂತೆ ಕಬ್ಬಿಣದ ತಂತಿಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.ಬಳಿಕ ಯಾರಿಗೂ ಅನುಮಾನ ಬರಬಾರದೆಂದು ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಬಾವಿಗೆ ಎಸೆದಿದ್ದಾರೆ. ಆದರೆ ಮೃತದೇಹದ ಪೋಸ್ಟ್ ಮಾರ್ಟಂ ಮಾಡಿದಾಗ ಪೊಲೀಸರಿಗೆ ಕೊಲೆ ವಿಚಾರ ಗೊತ್ತಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.