ಮೈಕ್ರೋ ಫೈನಾನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ 26 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಅತ್ಯಾಚಾರದ ದೃಶ್ಯಗಳನ್ನು ವಿಡಿಯೇ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪರ್ವೆಜ್, ಸಾಲಕ್ಕಾಗಿ ಎದುರು ನೋಡುತ್ತಿರುವ ಕೆಲವು ಮಹಿಳೆಯರನ್ನು ಪರಿಚಯಿಸುವುದಾಗಿ ಭರವಸೆ ನೀಡಿ ಯುವತಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರದ ವಿಡಿಯೋ ಮಾಡಿ ಹಣ ಕೊಡದಿದ್ದಲ್ಲಿ ಇಂಟರ್ನೆಟ್ನಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ. ಕಳೆದ ಆರು ತಿಂಗಳಲ್ಲಿ ಯುವತಿಯಿಂದ ಎರಡು ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ