ಚೆನ್ನೈ: ಪ್ರಿಯಕರನೊಂದಿಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಿಯಕರನೊಂದಿಗೆ ಕಟ್ಟಡವೊಂದರಲ್ಲಿ ರಾತ್ರಿ ವೇಳೆ ಜೊತೆಗಿದ್ದ ಯುವತಿಯನ್ನು ಬೆದರಿಸಿ, ಆಕೆಯ ಪ್ರಿಯಕರನ ಎದುರೇ ಅತ್ಯಾಚಾರ ನಡೆಸಲಾಗಿದೆ.ಈ ವೇಳೆ ಪೊಲೀಸ್ ಸೈರನ್ ಕೇಳಿಸಿದ್ದು, ಭಯಗೊಂಡ ಆರೋಪಿಗಳನ್ನು ಪರಾರಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಯುವತಿ ಮತ್ತು ಪ್ರಿಯಕರನನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.