ನವದೆಹಲಿ: ಮಹಿಳೆ ತನ್ನ ಸಂಸಾರ ಮತ್ತು ಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಚಾಕಚಕ್ಯತೆ ಹೊಂದಿದ್ದಾಳೆ. ಇದೀಗ ಅಂತಹದ್ದೇ ಕೆಲಸ ಮಾಡಿದ ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ತಕ್ಕ ಬಹುಮಾನವೇ ಸಿಕ್ಕಿದೆ.ಉತ್ತರ ಪ್ರದೇಶದ ಝಾನ್ಸಿ ಪೊಲೀಸ್ ಠಾಣೆಯ ಮಹಿಳಾ ಪೇದೆ ಅರ್ಚನಾ ಜಯಂತ್ ತನ್ನ ಪುಟ್ಟ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಫೋಟೋ ನೋಡಿ ಸಾವಿರಾರು ಜನ ಆಕೆಯ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ