ಒಡಿಶಾ : ಮಹಿಳೆಯೊಬ್ಬಳು ಯುವಕನೊಬ್ಬನಿಗೆ ಮದ್ಯಪಾನ ಮಾಡಿಸಿ ಆತ ಪ್ರಜ್ಞೆ ತಪ್ಪಿದಾಗ ಆತನ ಮರ್ಮಾಂಗವನ್ನು ಕತ್ತರಿಸಿದ ಘಟನೆ ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಹರಿಚಂದನ್ ಪುರ್ ಪ್ರದೇಶದಲ್ಲಿ ನಡೆದಿದೆ. ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಂಜೆ ಮನೆಗೆ ಬರುತ್ತಿದ್ದ ವೇಳೆ ಕತ್ತಲಾದ್ದರಿಂದ ಹರಿಚಂದನ್ ಪುರದಲ್ಲಿರೋ ಮಹಿಳೆಯೊಬ್ಬಳ ಮನೆಯಲ್ಲಿ ತಂಗಿದ್ದಾನೆ. ಆ ವೇಳೆ ಆತ ಬೇರೆಯವರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದು, ಇದನ್ನು ಆಕೆ ಖಂಡಿಸಿದ್ದಾಳೆ. ಈ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ.