ತಾಯಿಯ ಮೇಲಿನ ಸೇಡಿಗೆ 3 ತಿಂಗಳ ಮಗುವಿಗೆ ಇಂತಹ ಗತಿ ತಂದ ಮಹಿಳೆ

ಚಂಡೀಗರ್| pavithra| Last Modified ಸೋಮವಾರ, 19 ಏಪ್ರಿಲ್ 2021 (07:03 IST)
ಚಂಡೀಗರ್ :ಪಂಜಾಬ್ ನ ಅಮೀರ್ ಖಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ತಿಂಗಳ ಬಾಲಕಿಯನ್ನು ಆಕೆಯ ತಂದೆಯ ಸಹೋದರಿ  ಜೀವಂತವಾಗಿ ಸಮಾಧಿ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಕೌಂಟುಂಬಿಕ ಕಲಹದ ಹಿನ್ನಲೆಯಲ್ಲಿ ಆರೋಪಿಗೆ ಮಗುವಿನ ತಾಯಿಯ ಮೇಲೆ ಕೋಪವಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಇಂತಹ ಕೃತ್ಯ ಎಸಗಿದ್ದಾಳೆ. ಮಗು ಕಾಣಿಸದಿದ್ದಾಗ ತಾಯಿ ಮಗುವನ್ನು ಹುಡುಕಾಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಗುವಿನ ಶವವನ್ನು ಪತ್ತೆ ಮಾಡಿದ್ದಾರೆ.> > ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಮಹಿಳೆ ಸಿಕ್ಕಿಹಾಕಿಕೊಂಡಿದ್ದು, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.  


ಇದರಲ್ಲಿ ಇನ್ನಷ್ಟು ಓದಿ :