ಗುರುಗ್ರಾಮ : ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಳಾದವಳು ವ್ಯಕ್ತಿಯೊಬ್ಬನ ನಗ್ನ ವಿಡಿಯೋ ತೆಗೆದು ಅದನ್ನು ಪೋಸ್ಟ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ವ್ಯಕ್ತಿಗೆ ಮಹಿಳೆ ಡೇಟಿಂಗ್ ಆ್ಯಪ್ ನಿಂದ ಪರಿಚಯವಾಗಿ ಬಳಿಕ ಇಬ್ಬರು ಪೋನ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಲು ಶುರು ಮಾಡಿದ್ದಾರೆ. ಒಂದು ದಿನ ಆಕೆ ವ್ಯಕ್ತಿಗೆ ವಿಡಿಯೋ ಕರೆ ಮಾಡಿ ನಗ್ನವಾಗಿರುವಂತೆ ಒತ್ತಾಯಿಸಿ ಆತನಿಗೆ ತಿಳಿಯದಂತೆ ಅದನ್ನು ವಿಡಿಯೋ ಮಾಡಿದ್ದಾಳೆ.