ನವದೆಹಲಿ: ಹೊಸದಾಗಿ ಚಿನ್ನಾಭರಣ ಖರೀದಿ ಮಾಡಿದಾಗ ನೆರೆಮನೆಯವರಿಗೆ ತೋರಿಸಿ ಬೀಗುವುದು ಮಹಿಳೆಯರ ಸಹಜ ಸ್ವಭಾವ. ಆದರೆ ಇದೇ ರೀತಿ ಮಾಡಲು ಹೋಗಿ ದೆಹಲಿಯಲ್ಲಿ ಒಬ್ಬಾಕೆಯ ಕೊಲೆಯೇ ಆಗಿ ಹೋಗಿದೆ. 55 ವರ್ಷದ ಶಾರದಾ ಗೋವಿಂದ್ ಎಂಬವರು ಮಂಗಳ ಸೂತ್ರ ಖರೀದಿಸಿದ್ದರು. ಅದನ್ನು ನೆರೆಮನೆಯವರಿಗೆ ತೋರಿಸಿದ ಕೆಲ ಹೊತ್ತಿನಲ್ಲಿ ಸರ ಕಳ್ಳತನವಾಗಿತ್ತು. ಸರ ತೋರಿಸುವಾಗ ಅಲ್ಲಿದ್ದ ಅಪ್ರಾಪ್ತ ಬಾಲಕಿ ಮೇಲೆ ಶಾರದಾಗೆ ಅನುಮಾನ ಬಂದಿದೆ. ಹೀಗಾಗಿ ಆಕೆಯನ್ನು ಪ್ರಶ್ನಿಸಿದಾಗ ನೆರೆಮನೆಯವರ