ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಟ್ಟಿಗೆ ತುರುಕಿ ವಿಕೃತ ಮೆರೆದ ಕಾಮುಕರು

ರಾಂಚಿ, ಶನಿವಾರ, 10 ನವೆಂಬರ್ 2018 (07:01 IST)

ರಾಂಚಿ : ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಮತ್ತು ಆತನ ಗೆಳೆಯರು ನಡೆಸಿದ ಹಿನ್ನಲೆಯಲ್ಲಿ ಮಹಿಳೆ ಸಾವನಪ್ಪಿದ ಘಟನೆ ಜಾರ್ಖಂಡ್ ರಾಜ್ಯದ ಜಮ್ತಾರಾ ಜಿಲ್ಲೆಯಲ್ಲಿ ನಡೆದಿದೆ.


ರಾತ್ರಿ ಸಿನಿಮಾ ನೋಡಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಆಕೆಯ ಮಾಜಿ ಪತಿ ಹಾಗೂ ಸ್ನೇಹಿತರು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮೂವರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಸಂತ್ರಸ್ತೆಯ ಗುಪ್ತಾಂಗಕ್ಕೆ ಕಟ್ಟಿಗೆಯನ್ನು ತುರುಕಿಸಿ ಅಲ್ಲಿಂದ  ಪರಾರಿಯಾಗಿದ್ದಾರೆ.


ಬೆಳಗ್ಗೆ ಮಹಿಳೆಯ ಕಿರುಚಾಟ ಕೇಳಿದ ಗ್ರಾಮಸ್ಥರು ಕೂಡಲೇ ಸಂತ್ರಸ್ತೆಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಹಿಳೆಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾಳೆ.


ಈ ಪ್ರಕರಣ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ಕ್ಕೆ ಸಂಬಂಧಿಸಿದ ಮಹಿಳೆಯ ಮಾಜಿ ಪತಿಯನ್ನು ಬಂಧಿಸಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಫೋನಿನಲ್ಲಿ ಮಾತನಾಡಿದ್ದಕ್ಕೆ ಯುವಕನ ಮರ್ಮಾಂಗ ಕತ್ತರಿಸಿದ ಮಹಿಳೆ

ಒಡಿಶಾ : ಮಹಿಳೆಯೊಬ್ಬಳು ಯುವಕನೊಬ್ಬನಿಗೆ ಮದ್ಯಪಾನ ಮಾಡಿಸಿ ಆತ ಪ್ರಜ್ಞೆ ತಪ್ಪಿದಾಗ ಆತನ ಮರ್ಮಾಂಗವನ್ನು ...

news

ಗ್ರೀನ್ ಕಾರಿಡಾರ್ ಹೆದ್ದಾರಿ ಕಲಬುರಗಿ ನಗರದಿಂದ ಹಾದು ಹೋಗಲಿ ಎಂದ ಖರ್ಗೆ

ಉದ್ದೇಶಿತ ಮುಂಬೈ-ಚೆನ್ನೈ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ...

news

ಕೇಸ್ ರದ್ದುಗೊಳಿಸಿ ಎಂದು ಕೋರ್ಟ ಮೆಟ್ಟಿಲೇರಿದ ರೆಡ್ಡಿ

ತಲೆ ಮರೆಸಿಕೊಂಡಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ವಿರುದ್ಧದ ಆಂಬಿ‌ಡೆಂಟ್ ಕಂಪೆನಿಯ ವಂಚನೆ ಪ್ರಕರಣ ...

news

ಬಿಜೆಪಿಯಿಂದ ಸರ್ವಾಧಿಕಾರಿ ಆಡಳಿತ ಎಂದ ಖರ್ಗೆ

ಕೇಂದ್ರದಲ್ಲಿ ಬಿಜೆಪಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ...