ಛತ್ತೀಸ್ಗಢದ 10 ನೇ ತರಗತಿಯ ಪಠ್ಯಪುಸ್ತಕದ ಭಾಗದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ದುಡಿಯುವ ಮಹಿಳೆಯೇ ಕಾರಣವೆಂದು ಪ್ರಕಟಿಸಿರುವುದು ಬೆಳಕಿಗೆ ಬಂದಿದ್ದು, ಬಿಜೆಪಿ ಸರ್ಕಾರ ತೀವ್ರ ಮುಜುಗರಪಡುವಂತಾಗಿದೆ. ಛತ್ತೀಸ್ಗಢ ಪ್ರೌಢಶಿಕ್ಷಣ ಮಂಡಳಿ ಪ್ರಕಟಿಸಿದ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯದ ಬಳಿಕ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಆರಂಭಿಸಿದ ಬಳಿಕ ನಿರುದೋಗ್ಯದ ಪ್ರಮಾಣ ಹೆಚ್ಚಿದೆ ಎಂದು ಪ್ರಸ್ತಾಪಿಸಲಾಗಿದೆ. ಆದಾಗ್ಯೂ ಈ ವಿಷಯವನ್ನು ಜಸ್ಪುರ್ ಜಿಲ್ಲೆಯ ಶಿಕ್ಷಕಿರೊಬ್ಬರು ಗಂಭೀರವಾಗಿ ಪರಿಗಣಿಸಿ, ರಾಜ್ಯ ಮಹಿಳಾ ಆಯೋಗಕ್ಕೆ ಅರ್ಜಿಯೊಂದನ್ನು