Widgets Magazine

ಗೆಳೆಯನೊಂದಿಗೆ ವಾಟ್ಸ್ ಆ್ಯಪ್ ಚಾಟ್ ಮಾಡುತ್ತಿದ್ದ ಹುಡುಗಿಗೆ ಸಹೋದರ ಮಾಡಿದ್ದೇನು ಗೊತ್ತಾ?

ನವದೆಹಲಿ| pavithra| Last Modified ಶನಿವಾರ, 21 ನವೆಂಬರ್ 2020 (07:37 IST)
ನವದೆಹಲಿ : ತನ್ನ ಗೆಳೆಯನ ಜೊತೆ ವಾಟ್ಸ್ ಆ್ಯಪ್ ನಲ್ಲಿ  ಚಾಟ್ ಮಾಡುತ್ತಿದ್ದ 16 ವರ್ಷದ ಹುಡುಗಿಗೆ ಆಕೆಯ 17 ವರ್ಷದ ಸಹೋದರ ಗುಂಡು ಹಾರಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಹುಡುಗಿ ಯಾವಾಗಲೂ ತನ್ನ ಗೆಳೆಯನ ಜೊತೆ ಚಾಟ್ ಮಾಡುತ್ತಿದ್ದಳು. ಇದು ಸಹೋದರನಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಆತ ಚಾಟ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ, ಆದರೆ ಇದಕ್ಕೆ ಹುಡುಗಿ ಕಿವಿಕೊಡದೆ ಮತ್ತೆ ಚಾಟ್ ಮಾಡುವುದನ್ನು ಮುಂದುವರಿಸಿದ್ದಾಳೆ. ಇದರಿಂದ  ಕೋಪಗೊಂಡ ಆತ ತನ್ನ ಬಳಿ ಇದ್ದ ಬಂದೂಕಿನಿಂದ ಸಹೋದರಿಯ ಹೊಟ್ಟೆಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹೋದರನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :