ಚಲಿಸುವ ಕಾರಿನಲ್ಲಿ ಯುವತಿ ಮೇಲೆ ಅತ್ಯಾಚಾರ!

ಉತ್ತರಪ್ರದೇಶ| Ramya kosira| Last Modified ಶುಕ್ರವಾರ, 26 ನವೆಂಬರ್ 2021 (14:46 IST)
ಲಖನೌ : ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣದ ಮಾದರಿಯಲ್ಲಿ ಚಲಿಸುವ ಕಾರಿನಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ
ಎಸಗಿರುವ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ಮಂಗಳವಾರ ಜರುಗಿದೆ. ಆರೋಪಿ ತೇಜ್ವೀರ್ ಸಂತ್ರಸ್ತೆಯನ್ನು ಆಗ್ರಾಕ್ಕೆ ಕರೆದೊಯ್ದಿದ್ದ. ಸಂತ್ರಸ್ತೆಯು ಸಬ್ಇನ್ಸ್ಪೆಕ್ಟರ್ ಪರೀಕ್ಷೆ ಬರೆಯುವ ಸಲುವಾಗಿ ಅಲ್ಲಿಗೆ ತೆರಳಿದ್ದಳು.
ಮರಳಿ ಕಾರಿನಲ್ಲಿ ಬರುವಾಗ ಆರೋಪಿಯು ಬಲವಂತದಿಂದ ಸಂತ್ರಸ್ತೆಯ ಮೇಲೆರಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಮಥುರಾದ ಹೊರವಲಯವಾದ ಕೋಸಿ ಕಲನ್ ಪ್ರದೇಶದಲ್ಲಿ ಆಕೆಯನ್ನು ಕಾರಿನಿಂದ ಹೊರದೂಡಿ ಹೋಗಿದ್ದಾನೆ. ತೇಜ್ವೀರ್ಗೆ ದಿಗಂಬರ್ ಎಂಬ ಸ್ನೇಹಿತ ದುಷ್ಕೃತ್ಯದಲ್ಲಿ ಸಾಥ್ ನೀಡಿದ್ದಾನೆ.
ಯುವತಿಯ ದೂರು ಆಧರಿಸಿ ತೇಜ್ವೀರ್ನನ್ನು ಬಂಧಿಸಲಾಗಿದೆ ಎಂದು ಮಥುರಾ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜ್ವೀರ್ ಸಂತ್ರಸ್ತೆಯನ್ನು ಪರಿಚಯಿಸಿಕೊಂಡು, ಸ್ನೇಹ ಬೆಳೆಸಿದ್ದ ಎಂದು ತಿಳಿದುಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :