ನವದೆಹಲಿ: ಇನ್ನೇನು ಒಂದು ತಿಂಗಳು ಕಳೆದರೆ ಹೊಸ ವರ್ಷ ಸ್ವಾಗತಿಸಲು ಸಿದ್ಧರಾಗುತ್ತೇವೆ. ಆದರೆ ಈ ಹೊಸ ವರ್ಷದ ಜತೆಗೆ ನಿಮಗೊಂದು ಶಾಕ್ ಕೂಡಾ ಕಾದಿದೆ. ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್, ಐಡಿಯಾ, ಏರ್ ಟೆಲ್ ಹೊಸ ವರ್ಷದ ಸಂದರ್ಭದಲ್ಲಿ ಫೋನ್ ಟಾರಿಫ್ ರೇಟ್ ನ್ನು 15- 20 ಶೇಕಡಾ ಹೆಚ್ಚಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ನಷ್ಟದಲ್ಲಿರುವ ಟೆಲಿಕಾಂ ಕಂಪನಿಗಳು ತಮ್ಮ ಲಾಭ ನೋಡಿಕೊಳ್ಳಲು ಇದೇ ಸಂದರ್ಭದ ಸದುಪಯೋಗಪಡಿಸಿಕೊಳ್ಳಲು ಚಿಂತನೆ ನಡೆಸಿವೆ.