Widgets Magazine

ಯುವಕನ ಸಾವಿನಿಂದ ಆಕ್ರೋಶಗೊಂಡು ಮಹಿಳಾ ವೈದ್ಯೆಗೆ ಥಳಿಸಿದ ಕುಟುಂಬಸ್ಥರು

ಮುಂಬೈ| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (10:40 IST)
ಮುಂಬೈ: 18 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಸಾವಿಗೀಡಾದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಲ್ಲದೆ, ಮಹಿಳಾ ವೈದ್ಯೆ ಮೇಲೆ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ.
 

ತೀವ್ರ ಜ್ವರದಿಂದ ಬಳಲುತ್ತಿದ್ದ 18 ವರ್ಷದ ಯುವಕನೊಬ್ಬ ಸೆಪ್ಟೆಂಬರ್ 5 ರಂದು ಮುಂಬೈನ ಕೆಇಎಂ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಆದರೆ ಆತ ವೈದ್ಯರ ನಿರ್ಲ್ಷ್ಯಕ್ಷದಿಂದಲೇ ಸಾವನ್ನಪ್ಪಿದ್ದಾನೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ವೈದ್ಯೆಯ ಮೇಲೆ  ನಡೆಸಿದ್ದಾರೆ. ಈ ಸಂಬಂಧ ಐವರ ಮೇಲೆ ಪ್ರಕರಣ ದಾಖಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :