ನವದೆಹಲಿ: ಓದದೇ ಸದಾ ಗಾಳಿಪಟ ಹಾರಿಸುತ್ತಾ ಕಾಲ ಕಳೆಯುತ್ತೀಯಾ ಎಂದು ಬೈದಿದ್ದಕ್ಕೆ ಪೋಷಕರನ್ನೇ 19 ವರ್ಷದ ಯುವಕನೊಬ್ಬ ಕೊಲೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ.ಆಗಸ್ಟ್ 15 ರಂದು ಓದು ಎಂದರೂ ಕೇಳದೇ ಗಾಳಿಪಟ ಹಾರಿಸುತ್ತಿದ್ದ ಮಗನನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬೇಸತ್ತಿದ್ದ ಆತ ತನ್ನ ಅಪ್ಪ –ಅಮ್ಮ ಜತೆಗೆ ಸಹೋದರಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದು ಅಮಾಯಕನಂತೆ ನಟಿಸಿದ್ದ.ಆದರೆ ಕುಟುಂಬದ ಮೂವರೂ ಕೊಲೆಯಾಗಿ ಈತನಿಗೆ ಮಾತ್ರ ಕೈಗ ಬೆರಳಿಗೆ ಗಾಯವಾಗಿದ್ದು ನೋಡಿ ಅನುಮಾನಗೊಂಡ