ಹೈದರಾಬಾದ್: ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಸ್ನೇಹ ಸಂಬಂಧ ಮಾಡಿದ್ದರಿಂದ ಆಕ್ರೋಶಗೊಂಡ ಪಾಗಲ್ ಪ್ರೇಮಿಗೆ ಆಕೆಗೆ ಬರ್ಬರವಾಗಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ತನ್ನ ಪ್ರೇಯಸಿ ಇನ್ನೊಬ್ಬನ ಜೊತೆ ಸ್ನೇಹ ಮಾಡಿರುವುದು ಈತನಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಮದುವೆಗೆ ನಿರಾಕರಿಸಿದ್ದಳು.ಇದರಿಂದ ಉದ್ರಿಕ್ತಗೊಂಡ ಆರೋಪಿ ಯುವತಿಗೆ 18 ಬಾರಿ ಇರಿದು ಹಲ್ಲೆ ನಡೆಸಿದ್ದಾನೆ.