ಮೀನು ಎಂದಾಕ್ಷಣ ಎಲ್ಲರೂ ಕರಾವಳಿ ರೆಸ್ಟೋರೆಂಟ್ಗಳನ್ನು ಅಥವಾ ಅಲ್ಲಿನ ನಾನಾ ವಿಧದ ಮೀನುಗಳ ರಾಶಿಯನ್ನೋ ನೆನಪಿಸಿಕೊಳ್ಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬೆಂಗಳೂರು ಮೈಸೂರು ಕಡೆಗೆ ಬಂದ ಕರಾವಳಿಗರಂತೂ ನಮ್ಮ ಕೆರೆ ಮತ್ತು ಹೊಳೆ ಮೀನುಗಳನ್ನು ಅಣಕಿಸುವುದು, ತಿನ್ನುವುದಿಲ್ಲವೆಂದು ಮೂಗು ಮುರಿಯುವುದು ಮಾಡುತ್ತಾರೆ.ಇಲ್ಲಿನ ಮೀನುಗಳಲ್ಲಿ ಮಣ್ಣಿನ ವಾಸನೆ ಎನ್ನುತ್ತಾರೆ. ಆದರೆ ಬಯಲುಸೀಮಿಗರಿಗೆ ಇಂತಹ ವ್ಯತ್ಯಾಸವೇ ಇಲ್ಲ. ಸಮುದ್ರ ಹೊಳೆ ಕೆರೆ ಎಲ್ಲ ಕಡೆಯೂ ಬೆಳೆದ ನಾನಾ ರುಚಿಯ ಮೀನುಗಳನ್ನು ತಿನ್ನುವುದನ್ನು ರೂಢಿಮಾಡಿಕೊಂಡಿದ್ದಾರೆ.ಇದೊಂದು