ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ

ವಿದ್ಯಾಗಿರಿ (ಮೂಡುಬಿದಿರೆ), ಶುಕ್ರವಾರ, 28 ನವೆಂಬರ್ 2008 (19:14 IST)

ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ ಪ್ರಕಾರಗಳ ಅನುರಣನದೊಂದಿಗೆ ಅದ್ದೂರಿಯೊಂದಿಗೆ ಆರಂಭವಾಯಿತು.

ನುಡಿಸಿರಿಯಲ್ಲಿ ಕಚ್ಚೆ ತೊಟ್ಟ ಸಾಹಿತಿ ನಿಸಾರ್ ಅಹಮ್ಮದ್

WD

ಬೆಳಿಗ್ಗೆ 9.15ರಿಂದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷ ನಾಡೋಜ, ಡಾ.ಚೆನ್ನವೀರ ಕಣವಿ ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವ್ಯಾಸರಾಯ ಬಲ್ಲಾಳ ಸಭಾ ಮಂಟಪಕ್ಕೆ ಕರೆದು ತರಲಾಯಿತು. ಸಮ್ಮೇಳನದ ಉದ್ಘಾಟಕ, ನಾಡೋಜ ಕವಿ ಕೆ.ಎಸ್.ನಿಸಾರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಶಾಸಕ ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ನುಡಿಸಿರಿ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನದ ರೂವಾರಿ ಡಾ.ಮೋಹನ ಆಳ್ವ ಹಾಗೂ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ ಅವರನ್ನು ವೇದಿಕೆಗೆ ಸಡಗರದ ಮೆರವಣಿಗೆಯಲ್ಲಿ ಕರೆದು ತರಲಾಯಿತು.

ಕೊಂಬು ಕಹಳೆ, ಚೆಂಡೆವಾದನ, ಬೊಂಬೆ ಕುಣಿತ, ಹುಲಿವೇಷ ಇತ್ಯಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಸಮ್ಮೇಳನದ ಉದ್ಘಾಟನೆಗೆ ಕಳೆ ನೀಡಿದವು.

ಭತ್ತದ ತೆನೆಗೆ ಹಾಲೆರೆಯುವ ಮ‌ೂಲಕ
WDಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಚೌತಿ ವಿಶೇಷ: 'ವಕ್ರ'ತುಂಡ 'ಮಹಾ'ಕಾಯ ನಮಗೆಷ್ಟು ಮುಖ್ಯ?

ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ...

ಸ್ವರ್ಣಗೌರಿ ವ್ರತದ ಪೌರಾಣಿಕ ಕಥೆ

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ...

ಬರಬರುತ್ತಾ ಉದಾರಿಯಾಗುತ್ತಿರುವ ಗಣೇಶ

ಅಂತೂ ಇಂತು ಗಣೇಶ ಚತುರ್ಥಿ ಬಂದಿದೆ. ಮುಂದಿನ ಮೂರು ನಾಲ್ಕು ವಾರ ಇನ್ನು ಏನಿದ್ದರೂ ಗಣೇಶನದ್ದೇ ಕಾರುಬಾರು. ...

ಸಂಭ್ರಮ, ಸಡಗರದ ಗಣೇಶನ ಹಬ್ಬ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ...