ಆಳ್ವಾಸ್ ನುಡಿಸಿರಿ ತೇರಿಗೆ ಸಂಭ್ರಮದ ತೆರೆ

ಮೂಡುಬಿದರೆ: , ಸೋಮವಾರ, 1 ಡಿಸೆಂಬರ್ 2008 (09:18 IST)

ಇಲ್ಲಿನ ವಿದ್ಯಾಗಿರಿಯಲ್ಲಿ ಮೂರು ದಿನಗಳ ಕಾಲ ನಡೆದ ಐದನೇ ವರ್ಷದ "ಆಳ್ವಾಸ್ ನುಡಿಸಿರಿ' ಕನ್ನಡ ನಾಡು ನುಡಿಯ ರಾಷ್ಟ್ರೀಯ ಭಾನುವಾರ ಸಂಜೆ ಸಂಪನ್ನಗೊಂಡಿತು.

WD

ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಸಾಹಿತ್ಯಾಭಿಮಾನಿಗಳು, ವಿದ್ಯಾರ್ಥಿಗಳು ಸಂಭ್ರಮ, ಸಡಗರಗಳಿಂದ ನಡೆದ ನುಡಿಸಿರಿಯಲ್ಲಿ ಮಿಂದ ಸಂತೃಪ್ತಿ ಅನುಭವಿಸಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸಮಾರೋಪ ಭಾಷಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿನಂದನ ಭಾಷಣ ಮಾಡುತ್ತಾ, ಕನ್ನಡತನ ಉಳಿಸಿಕೊಳ್ಳಲು ಭೌತಿಕ ಹೋರಾಟಕ್ಕಿಂತಲೂ ಆಂತರಿಕ ಕ್ರಾಂತಿ ಅಗತ್ಯ ಎಂದು ಪ್ರತಿಪಾದಿಸಿದರು.

ಕನ್ನಡಾಭಿಮಾನ ಎನ್ನುವುದು ಕೇವಲ ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕೆ ಇರುವಂಥದಲ್ಲ. ಅದನ್ನು ಎಲ್ಲರೂ ತಮ್ಮತಮ್ಮಲ್ಲೇ ಅಳವಡಿಸಿಕೊಳ್ಳಬೇಕು. ದೈನಂದಿನ ಪರಿಸರದಲ್ಲಿ ಕನ್ನಡತನ ಬೆಳೆಸಿಕೊಳ್ಳುವಂಥ ವಾತಾವರಣ ಮೂಡಿಸಬೇಕಾಗಿದೆ. ಅಂಥ ವಾತಾವರಣ ನುಡಿಸಿರಿಯಂಥ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ ಎಂದರು. ಕನ್ನಡ ಸಾಹಿತ್ಯ ಉತ್ಸವಗಳಿಗೆ ಜನರನ್ನು ಕೇವಲ ಆಕರ್ಷಣೆಗಳ ಮೂಲಕ ಸೆಳೆಯಬಾರದು. ಅಂಥ ಸೆಳೆತ ತಾತ್ಕಾಲಿಕ ಎಂದು ಹೇಳಿದ ಹೆಗ್ಗಡೆಯವರು, ಕನ್ನಡ ಅನುಷ್ಠಾನದಲ್ಲಿ ಮಾಧ್ಯಮಗಳ ಪಾತ್ರ ಕೂಡಾ ಹಿರಿದಾದುದು ಎಂದರು.

ಸಮ್ಮೇಳಾಧ್ಯಕ್ಷ ಚೆನ್ನವೀರ ಕಣವಿ ಅವರು ಮಾತನಾಡಿ, ನಮ್ಮ ನೆಲ, ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕು. ಕೋಮುವಾದ ಭಾರತೀಯ ನೆಲದ ಗುಣವಲ್ಲ. ಹಿಂದೂ ಧರ್ಮದ ಮೂಲ ಆಶಯದಲ್ಲಿ ಕೋಮುವಾದಕ್ಕೆ ಜಾಗವಿಲ್ಲ ಎಂದರು.

ಸಮಾರಂಭಕ್ಕೆ ಮೊದಲು ಅತಿಥಿಗಳನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ. ಮೋಹನ ಆಳ್ವಾ ಅವರು ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಪಾದೆಕಲ್ಲು ವಿಷ್ಣು ಭಟ್ಟ ಸಮ್ಮೇಳನದ ಹಿಮ್ಮಾಹಿತಿ ನೀಡಿದರು. ಉಪನ್ಯಾಸಕ ಧನಂಜಯ ಕುಂಬಳೆ ವಂದಿಸಿದರು.ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಕನ್ನಡಮ್ಮನ ಐಸಿರಿ 'ನುಡಿಸಿರಿ'ಗೆ ಸಜ್ಜಾಗಿದೆ ಮೂಡುಬಿದಿರೆ

2004ರಲ್ಲಿ ಆರಂಭವಾಯಿತು ಈ ನುಡಿಸಿರಿ ಎಂಬ ನುಡಿ ಜಾತ್ರೆಯ ಸರಣಿ. ಈ ಬಾರಿ ನವೆಂಬರ್ 28, 29 ಹಾಗೂ 30ರಂದು ...

ಆಳ್ವಾಸ್ ನುಡಿಸಿರಿಗೆ ಕಣವಿ ಸಾರಥ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕನ್ನಡ ನಾಡು-ನುಡಿಯ ...

ಆಳ್ವಾಸ್ ನುಡಿಸಿರಿ-08: ನಿಮ್ಮ ವೆಬ್‌ದುನಿಯಾದಲ್ಲಿ

ಕನ್ನಡ ಮಣ್ಣಿನಲ್ಲಿ ಹಾಸುಹೊಕ್ಕಾಗಿರುವ ಜನಪದೀಯ ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಸಹೃದಯರಿಂದ ಯಾವ ...