ಚಾಣಾಕ್ಯನ 5 ನುಡಿಮುತ್ತುಗಳು

ಬೆಂಗಳೂರು, ಶುಕ್ರವಾರ, 3 ಮಾರ್ಚ್ 2017 (12:31 IST)

ಯಾರಾದರೂ ಜೀವನದಲ್ಲಿ ಮುಂದೆ ಬಂದಿದ್ದರೆ ಅವನನ್ನ ನೋಡಿ ಚಾಣಾಕ್ಯನಪ್ಪಾ ಎಂದು ಹೇಳುವ ಮಾತುಗಳನ್ನ ಕೇಳೇ ಇರುತ್ತೀರಿ. ಬುದ್ಧಿವಂತರನ್ನ ಚಾಣಾಕ್ಯರಿಗೆ ಹೋಲಿಸಿದ ವಾಡಿಕೆ ಇದೆ. ಎಂದರೆ ಬುದ್ಧಿವಂತಿಕೆ ಎಂಬ ಮಾತುಗಳೂ ಇವೆ. ಮೌರ್ಯರ ಪ್ರಥಮ ದೊರೆ ಚಂದ್ರಗುಪ್ತ ಮೌರ್ಯನ ಸಲಹೆಗಾರನಾಗಿದ್ದ ಖ್ಯಾತ ಅರ್ಥ ಶಾಸ್ತ್ರಜ್ಞ ವಿಷ್ಣುಗುಪ್ತಾ ಅಥವಾ ಚಾಣಾಕ್ಯನ ನೀತಿಗಳು ಇಂದಿಗೂ ಫೇಮಸ್. ರಾಜಕೀಯ ಮತ್ತು ಆರ್ಥಿಕ ವಿಚಾರದಲ್ಲಿ ಈತನ ನೀತಿಗಳು ಇಂದಿಗೂ ಜನಪ್ರಿಯ ಮತ್ತು ಪ್ರಚಲಿತ. ಕೌಟಿಲ್ಯನ ಅರ್ಥಶಾಸ್ತ್ರ ಎಲ್ಲ ಆರ್ಥಿಕ ನೀತಿಗಳಿಗೂ ಮಾದರಿ ಎನ್ನಲಾಗುತ್ತೆ.
  

ಇವತ್ತಿನ ನಿತ್ಯದ ಜೀವನಕ್ಕೂ ಸಂಬಂಧವಿರುವ ಚಾಣಾಕ್ಯ ಹೇಳಿದ ಕೆಲ ನುಡಿಮುತ್ತುಗಳು ಇಲ್ಲಿವೆ.
 
- ಬೇರೆಯವರು ಮಾಡಿರುವ ತಪ್ಪುಗಳನ್ನ ನೋಡಿ ಕಲಿ, ಅಷ್ಟೂ ತಪ್ಪುಗಳನ್ನ ಮಾಡುವಷ್ಟು ಸಮಯ ನೀನು ಬದುಕಿರುವುದಿಲ್ಲ.
 
- ನಿನಗೆ ಹಣದ ಸಮಸ್ಯೆ ಇದ್ದರೆ ಯಾರ ಬಳಿಯೂ ಚರ್ಚೆ ನಡೆಸಬೇಡ, ನಿನ್ನ ಆರ್ಥಿಕ ಸಮಸ್ಯೆಯನ್ನ ನಿನ್ನ ಬಳಿಯೇ ಇಟ್ಟುಕೋ.
 
- ಹೆಂಡತಿ ಬಗ್ಗೆ ಬೇರೆಯವರ ಬಳಿ ಹೇಳುವವರು ತಾವು ಅಂದುಕೊಂಡದನ್ನ ಬಿಟ್ಟು ಬೇರೆಯದ್ದನ್ನೇ ಹೇಳುತ್ತಾರೆ
 
- ಬಬ್ಬ ಮನುಷ್ಯ ತನ್ನ ಕೆಲಸದಿಂದಷ್ಟೇ ದೊಡ್ಡವನಾಗುತ್ತಾನೆ. ಹುಟ್ಟಿನಿಂದಲ್ಲ
 
- ಬೇರೆಯವರ ಬಳಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನ ಹೇಳಿಕೊಳ್ಳುವ ಜನರನ್ನ ಅಪಹಾಸ್ಯ ಮತ್ತು ಅಸಡ್ಡೆಯಿಂದ ನೋಡಲಾಗುತ್ತೆ ಮತ್ತು ಬೆನ್ನಹಿಂದೆಯೂ ಹಾಸ್ಯ ಮಾಡಿ ನಗುತ್ತಾರೆ.



ಇದರಲ್ಲಿ ಇನ್ನಷ್ಟು ಓದಿ :  

ವೆಬ್‌ದುನಿಯಾ ವಿಶೇಷ 08

ಚೌತಿ ವಿಶೇಷ: 'ವಕ್ರ'ತುಂಡ 'ಮಹಾ'ಕಾಯ ನಮಗೆಷ್ಟು ಮುಖ್ಯ?

ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ...

ಸ್ವರ್ಣಗೌರಿ ವ್ರತದ ಪೌರಾಣಿಕ ಕಥೆ

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ...

ಬರಬರುತ್ತಾ ಉದಾರಿಯಾಗುತ್ತಿರುವ ಗಣೇಶ

ಅಂತೂ ಇಂತು ಗಣೇಶ ಚತುರ್ಥಿ ಬಂದಿದೆ. ಮುಂದಿನ ಮೂರು ನಾಲ್ಕು ವಾರ ಇನ್ನು ಏನಿದ್ದರೂ ಗಣೇಶನದ್ದೇ ಕಾರುಬಾರು. ...

ಸಂಭ್ರಮ, ಸಡಗರದ ಗಣೇಶನ ಹಬ್ಬ

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. 1893ರಲ್ಲಿ ಸಮಾಜ ಸುಧಾರಕ ಮತ್ತು ...