Widgets Magazine

ಮ್ಯಾಚ್ ರೆಫ್ರಿಗೆ ಒದ್ದ ಕ್ಯೂಬಾದ ಮಾಟೋಸ್‌ಗೆ ನಿಷೇಧ

ಬೀಜಿಂಗ್| ಇಳಯರಾಜ| Last Modified ಶನಿವಾರ, 23 ಆಗಸ್ಟ್ 2008 (20:50 IST)
ಒಲಿಂಪಿಕ್ ಕ್ರೀಡಾಕೂಟದಲ್ಲಿ ಶನಿವಾರ ಕ್ಯೂಬಾದ ಏಂಜೆಲ್ ವಾಲೊಡಿಯಾ ಮಾಟೋಸ್ ಅವರು ಶನಿವಾರ ಟೆಕ್ವಾಂಡೋ ಹಣಾಹಣಿಯ ಸಂದರ್ಭದಲ್ಲಿ ಮ್ಯಾಚ್ ರೆಫ್ರಿ ಮುಖಕ್ಕೆ ಪಂಚ್ ಮಾಡಿದ್ದಕ್ಕೆ ಜೀವಾವಧಿ ನಿಷೇಧ ಶಿಕ್ಷೆಗೆ ಒಳಗಾದ ಘಟನೆ ನಡೆದಿದೆ.

ಸ್ಪರ್ಧಾ ಕಣದಲ್ಲಿಯೇ ಮ್ಯಾಚ್ ರೆಫ್ರಿ ಮುಖಕ್ಕೆ ಒದ್ದ ಪರಿಣಾಮ ಮಾಟೋಸ್‌ಗೆ ಜೀವಾವಧಿ ನಿಷೇಧ ವಿಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು.ಇದು ಟೆಕ್ವಾಂಡೋ ಪಂದ್ಯ ಮತ್ತು ಒಲಿಂಪಿಕ್ ಗೇಮ್ಸ್‌ನ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಟೆಕ್ವಾಂಡೋ ಹಣಾಹಣಿಯಲ್ಲಿ ಮಾಟೋಸ್ ಅವರು ಎದುರಾಳಿ ಕಜಕಿಸ್ತಾನದ ಅರ್ಮಾನ್ ಚಿಲ್‌‌ಮಾನೊವ್ ಅವರನ್ನು 3-2ರ ಅಂತರದಲ್ಲಿ ಸೋಲಿಸಿದ್ದರು. ಏತನ್ಮಧ್ಯೆ ಹೋರಾಟ ನಡೆಸುತ್ತಿದ ಸಂದರ್ಭದಲ್ಲಿ ಮ್ಯಾಚ್ ರೆಫ್ರೀ ಹೋರಾಟವನ್ನು ತಡೆಯಲು ಬಂದಾಗ ಮಾಟೋಸ್‌ ಮುಖಕ್ಕೆ ಒದ್ದಿದ್ದರು.


ಇದರಲ್ಲಿ ಇನ್ನಷ್ಟು ಓದಿ :