ವಂದನಾ ಹ್ಯಾಟ್ರಿಕ್: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪದಕ ಆಸೆ ಜೀವಂತ

bengaluru| geethanjali| Last Modified ಶನಿವಾರ, 31 ಜುಲೈ 2021 (14:35 IST)
ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ 4-3 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿಯಿತು. ಬ್ರಿಟನ್ ವಿರುದ್ಧ ಐರ್ಲೆಂಡ್ ಗೆದ್ದರೆ ಭಾರತಕ್ಕೆ ಕ್ವಾರ್ಟರ್ ಫೈನಲ್ ನಲ್ಲಿ ಸ್ಥಾನ ಭದ್ರವಾಗಲಿದೆ. ಈ ಮೂಲಕ ಭಾರತದ ಪದಕ ಆಸೆ ಜೀವಂತವಾಗಿ ಉಳಿದಿದೆ. ವಂದನಾ 4, 7 ಮತ್ತು 49ನೇ ನಿಮಿಷದಲ್ಲಿ ಗೋಲು ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ನೇಹಾ ಗೋಯೆಲ್ 32ನೇ ನಿಮಿಷದಲ್ಲಿ ಒಂದು ಗೋಲು ಸಿಡಿಸಿ ಭಾರತದ ಗೆಲುವು ಖಚಿತಪಡಿಸಿದರು. ದಕ್ಷಿಣ ಆಫ್ರಿಕಾ ಪರ ಟರಯಾನ್ (15), ನಾಯಕಿ ಇರಿನ್ ಹಂಟರ್ (30ನೇ ನಿಮಿಷ) ಮತ್ತು ಮರಿಜೆನ್ ಮರಿಯಾಸ್ (39ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಹೋರಾಟ ನಡೆಸಿದರು.


ಇದರಲ್ಲಿ ಇನ್ನಷ್ಟು ಓದಿ :