ಟೋಕಿಯೋ, ಜಪಾನ್ (ಜುಲೈ 21): ಕೊರೋನಾ ಬಿಕ್ಕಟ್ಟಿನಿಂದ ಒಂದು ವರ್ಷ ವಿಳಂಬವಾಗಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭಗೊಂಡಿತು. ಆತಿಥೇಯ ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಸಾಫ್ಟ್ ಬಾಲ್ ಪಂದ್ಯದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿತು. 2011ರ ಸುನಾಮಿ ಮತ್ತು ಪರಮಾಣು ದುರಂತದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಫುಕುಶಿಮಾ ಎಂಬ ಪ್ರದೇಶದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರು 8-1ರಿಂದ ಗೆದ್ದು ಬೀಗಿದರು. ಒಲಿಂಪಿಕ್ಸ್ ಕ್ರೀಡಾಕೂಟ ಇಂದು ಆರಂಭವಾದರೂ ಅಧಿಕೃತವಾಗಿ ಚಾಲನೆಗೊಳ್ಳುವುದು