Widgets Magazine

ಅಭಿನಯಿಸುವ ಇಂಗಿತ ವ್ಯಕ್ತ ಪಡಿಸಿದ ಪಿ.ವಿ. ಸಿಂಧು

ಹೈದರಾಬಾದ್| Jaya| Last Modified ಶನಿವಾರ, 30 ಜನವರಿ 2016 (12:04 IST)
ಕ್ರೀಡಾಳುಗಳು ಸಿನಿಮಾದಲ್ಲಿ ಅಭಿನಯಿಸುವುದು ಹೊಸದೇನಲ್ಲ. ಪ್ರಖ್ಯಾತ ಬ್ಯಾಡ್ಮಿಂಟರ್ ತಾರೆಯರಾದ ಅಶ್ವಿನಿ ನಾಚಪ್ಪ, ಜ್ವಾಲಾ ಗುಟ್ಟಾ ಕೆಲ ದಿನಗಳ ಅಭಿನಯಿಸುವ ಮೂಲಕ ಸುದ್ದಿಯಲ್ಲಿದ್ದರು. ಈಗ ಅವರದೇ ಸಹ ಕ್ರೀಡಾಪಟು ಪಿ.ವಿ. ಸಿಂಧು ಬೆಳ್ಳಿತೆರೆಯಲ್ಲಿ ಮಿಂಚುವ ಮನೋಭಿಲಾಷೆಯನ್ನು ಹಂಚಿಕೊಂಡಿದ್ದಾರೆ.

ತನ್ನದೇ ಜೀವನಕಥೆಯ ಸಿನಿಮಾ ನಿರ್ಮಾಣವಾದರೆ ತಾವು ಅಭಿನಯಿಸಲು ಬಯಸುವುದಾಗಿ 20 ವರ್ಷದ ಖ್ಯಾತ ತಾರೆ ಹೇಳಿಕೊಂಡಿದ್ದಾರೆ. 
 
ಆದರೆ ಇದು ಸಿನಿಮಾವನ್ನು ನಿರ್ದೇಶಿಸುವವರು ಯಾರು ಮತ್ತು ಶೂಟಿಂಗ್‌ಗೆ ಎಷ್ಟು ಸಮಯ ತಗಲುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
 
ತಮಗೆ ಸಂಗೀತವೆಂದರೆ ಅಪಾರ ಅಭಿಮಾನ ಎಂದಿರುವ ಅವರು ಈ ಬಾರಿ ಪದ್ಮವಿಭೂಷಣ ಪ್ರಶಸ್ತಿ ಗೆದ್ದಿರುವ ತಮ್ಮದೇ ತವರು ಹೈದರಾಬಾದ್ ಕ್ರೀಟಾಪಟುಗಳಾದ ಸೈನಾ ನೆಹವಾಲ್ ಮತ್ತು ಸಾನಿಯಾರವರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. 
 
ಕಳೆದ ಬಾರಿ ಸಿಂಧು ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದ ಅವರು ಇತ್ತೀಚಿಗೆ ಮಲೇಶಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದು, ಸದ್ಯದಲ್ಲಿ ಆರಂಭಗೊಳ್ಳಲಿರುವ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :