ಧೋನಿಯ ದಾಖಲೆ ಮುರಿಯಲು ಸಜ್ಜಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಲಂಡನ್| Krishnaveni K| Last Modified ಗುರುವಾರ, 27 ಜೂನ್ 2019 (10:44 IST)
ಲಂಡನ್: ವಿಶ್ವಕಪ್ ನ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಧೋನಿಯ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.

 
ಹಿಟ್ ಮ್ಯಾನ್ ಆಟಕ್ಕೆ ಕುದುರಿದರೆ ಅಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆಯೇ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂದು ಅಂತಹದ್ದೊಂದು ಇನಿಂಗ್ಸ್ ಆಡಿ ರೋಹಿತ್ ಎರಡು ಸಿಕ್ಸರ್ ಸಿಡಿಸಿದರೂ ಧೋನಿ ದಾಖಲೆ ಮುರಿದುಬೀಳಲಿದೆ.
 
ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಈಗ ಐದನೇ ಸ್ಥಾನದಲ್ಲಿದ್ದಾರೆ. ಸದ್ಯಕ್ಕೆ ಅವರ ಸಿಕ್ಸರ್ ಗಳಿಕೆ 224. ಧೋನಿ 225 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ ಎರಡು ಸಿಕ್ಸರ್ ಬಾರಿಸಿದರೆ ಧೋನಿ ದಾಖಲೆ ಮುರಿಯಲಿದ್ದಾರೆ. ಅಲ್ಲದೆ, ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :