ಮುಂಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಕ್ರಿಕೆಟ್ ಅಂದರೂ ಇಷ್ಟವೇ. ಆಕೆಯ ಪತಿಯೂ ಪಾಕ್ ಕ್ರಿಕೆಟಿಗ. ಹೀಗಿರುವಾಗ ಸಾನಿಯಾಗೆ ಕ್ರಿಕೆಟ್ ನಲ್ಲಿ ಯಾರೆಂದರೆ ಇಷ್ಟ? ಈಗೆಲ್ಲಾ ಪಕ್ಕನೇ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಎಲ್ಲರೂ ಧೋನಿ ಅಥವಾ ನಾಯಕ ಕೊಹ್ಲಿ ಹೆಸರು ಹೇಳುತ್ತಾರೆ. ಆದರೆ ಸಾನಿಯಾಗೆ ಪತಿ ಶೊಯೇಬ್ ಹೊರತುಪಡಿಸಿದರೆ ಧೋನಿ ಅಥವಾ ಕೊಹ್ಲಿಗಿಂತ ಇನ್ನೊಬ್ಬ ದಿಗ್ಗಜ ಕ್ರಿಕೆಟಿಗನೆಂದರೆ ಇಷ್ಟವಂತೆ.ಅವರೇ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್.