ನ್ಯೂಯಾರ್ಕ್|
Krishnaveni|
Last Modified ಶನಿವಾರ, 2 ಸೆಪ್ಟಂಬರ್ 2017 (10:02 IST)
ನ್ಯೂಯಾರ್ಕ್: ಟೆನಿಸ್ ಲೋಕದಲ್ಲಿ ಕೃಷ್ಣ ಸುಂದರಿ ಎಂದೇ ಕರೆಸಿಕೊಳ್ಳುವ ವಿಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
36 ವರ್ಷದ ಟೆನಿಸ್ ಆಟಗಾರ್ತಿ ಅಮೆರಿಕಾದ ವೆಸ್ಟ್ ಪಾಮ್ ಬೀಚ್ ಆಸ್ಪತ್ರೆಯಲ್ಲಿ ನಿನ್ನೆ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾರೆ. ಮಗು 3.6 ಕಿ. ಮೀ. ತೂಕವಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಸೆರೆನಾ ವಕ್ತಾರರಿಂದ ಸುದ್ದಿ ಬಂದಿಲ್ಲ. ಸೆರೆನಾ ರೆಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದನ್ನೂ ಓದಿ..
‘ಯಾವ ಕ್ಷಣದಲ್ಲಿ ಯಾರಿಗೆ ಬಾಂಬ್ ಇಡಬೇಕೆಂದು ಗೌಡರಿಗೆ ಚೆನ್ನಾಗಿ ಗೊತ್ತು’
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ