ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಸುಷ್ಮಾ ಸ್ವರಾಜ್

ಶುಕ್ರವಾರ, 14 ಮಾರ್ಚ್ 2014 (17:52 IST)

PR
ಮುಂಬರುವ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲಿರುವ ತನ್ನ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿ ಬಿಡುಗಡೆ ಮಾಡಿದೆ. 71 ಉಮೇದುವಾರರ ಘೋಷಣೆ ಮಾಡಿರುವ ಬಿಜೆಪಿ ಸುಷ್ಮಾ ಸ್ವರಾಜ್ ರವರನ್ನು ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಮತ್ತು ಸುಮಿತ್ರಾ ಮಹಾಜನ್ ರವರನ್ನು ಇಂದೋರ್ ನಿಂದ ಆಖಾಡಕ್ಕಿಳಿಸಲಿವೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ವರಿಷ್ಠ ಯಶವಂತ ಸಿನ್ಹಾ ಅವರ ಮಗ ಜಯಂತ್ ಸಿನ್ಹಾರವರಿಗೆ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾದ ರಾಮ್ ಕೃಪಾಲ್ ಯಾದವ್ ಅವರನ್ನು ಲಾಲೂ ಪ್ರಸಾದ್ ಯಾದವ್ ಮಗಳು ಮೀಸಾ ಭಾರತಿ ವಿರುದ್ಧ ಪಾಟಲಿಪುತ್ರದಲ್ಲಿ ಕಣಕ್ಕಿಳಿಸಲಾಗುವುದು.

ಶಹನವಾಜ್ ಹುಸೇನ್ ಬಿಹಾರದ ಭಾಗಲಪುರ, ಕೀರ್ತಿ ಆಜಾದ್ ದರಭಂಗಾದಿಂದ , ರಾಜೀವ ಪ್ರತಾಪ್ ರೂಡಿ ಸಾರಣದಿಂದ ಸ್ಪರ್ಧಿಸಲಿದ್ದಾರೆ. ಪ್ರಮೋದ ಮಹಾಜನ್ ರ ಪುತ್ರಿ ಪೂನಂ ಮಹಾಜನ್ ರವರನ್ನು ಮುಂಬೈ ಉತ್ತರ ಕೇಂದ್ರದಿಂದ, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ದೆಹಲಿ ಉತ್ತರ ಪೂರ್ವದಿಂದ ಸ್ಪರ್ಧಿಸಲು ಪ್ರಸ್ತಾವ ನೀಡಲಾಗಿದೆ.

ಡಾರ್ಜಿಲಿಂಗ್ ನ್ನು ಜಸ್ವಂತ್ ಸಿಂಗ್ ಬದಲಿಗೆ ಅಹ್ಲುವಾಲಿಯಾರವರಿಗೆ ನೀಡಲಾಗಿದ್ದು ಬಿಹಾರದ ಆರಾದಿಂದ ಆರ್.ಕೆ. ಸಿಂಗ್ ಸ್ಪರ್ಧಿಸಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...