ಪೇಟಿಎಂನ ಸುಮಾರು 40% ಮಾಲೀಕತ್ವ ಚೈನಾದ ಆಲಿಬಾಬಾ ಕಂಪನಿಯದ್ದು. ನೀವೆಲ್ಲಾ ಒಪ್ಪಿಕೊಳ್ಳುವಂತೆ ಚೈನಾ ನಮ್ಮ ಬಹುದೊಡ್ಡ ಶತ್ರು ದೇಶ (ಇಲ್ಲ; ಇಲ್ಲ. ಚೈನಾ ದೇಶದ ವಿರುಧ್ಹ ನಾವು ಎಂದಿಗೂ ಯುದ್ಧ ಹೂಡಿ ಗೆಲ್ಲಾಕ್ಕಾಗಲ್ಲವಾದ್ದರಿಂದ ಅದು ಶತ್ರು ದೇಶ ಅಲ್ಲ ಎನ್ನುವರೂ ಇದ್ದಾರೆನ್ನಿ). ಪಾಕಿಸ್ತಾನದ ಭಾರತ ವಿರುದ್ಧದ ನೀತಿಗಳು, ಭಾರತದ ವಿರುದ್ಧ ಉಗ್ರಗಾಮಿಗಳನ್ನು ತಯಾರು ಮಾಡಲಿಕ್ಕೆ, ಭಾರತದ ಒಳಗೆ ಕಳ್ಳನೋಟುಗಳನ್ನು ಹರಡಲಿಕ್ಕೆ ಚೈನಾ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿರುವುದು ಬಹಿರಂಗ ಸತ್ಯ.