ಆಲೂಗಡ್ಡೆ ಶೇಂಗಾ ಪುಡಿಯಿಂದ ಸ್ವಾದಿಷ್ಟವಾದ ಪರೋಟಾ..

ಬೆಂಗಳೂರು, ಮಂಗಳವಾರ, 26 ಮಾರ್ಚ್ 2019 (20:04 IST)

ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ 1/2 ಕೆಜಿ
* ಗೋಧಿ ಹಿಟ್ಟು 1/2 ಕೆಜಿ
* ಶೇಂಗಾ ಬೀಜ ಅರ್ಧ ಬಟ್ಟಲು
* ಗರಂ ಮಸಾಲಾ 1 ಚಮಚ
* ಟೊಮೆಟೊ 2
* ಈರುಳ್ಳಿ 2
* ಹಸಿಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು
* ಅರಿಶಿನ ಪುಡಿ 1/2 ಚಮಚ
* ಜೀರಿಗೆ 2 ಚಮಚ
* ಕರಿಬೇವು ಮತ್ತು ಕೊತ್ತಂಬರಿ ಸಣ್ಣಗೆ ಹೆಚ್ಚಿದ್ದು
 
 ತಯಾರಿಸುವ ವಿಧಾನ:
 
  ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಅದರ ಸಿಪ್ಪೆಯನ್ನು ತೆಗೆದು ಸ್ಮ್ಯಾಶ್ ಮಾಡಿಕೊಳ್ಳಬೇಕು. ನಂತರ ಈರುಳ್ಳಿ, ಟೊಮೆಟೊವನ್ನು ಸಣ್ಣಗೆ ಹೆಚ್ಚಿಕೊಂಡು ಮೆಣಸಿನಕಾಯಿಯ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಶೇಂಗಾವನ್ನು ಹುರಿದು ಬೇಳೆ ಮಾಡಿಕೊಂಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಬಾಣಲೆಯನ್ನು ತೆಗೆದುಕೊಂಡು 4 ಚಮಚ ಎಣ್ಣೆಯನ್ನು ಹಾಕಿ ಜೀರಿಗೆ, ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೆಟೊವನ್ನು ಹಾಕಿ ಬಾಡಿಸಿಕೊಳ್ಳಬೇಕು ನಂತರ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಕಾಯಿ ಪೇಸ್ಟ್, ಗರಂ ಮಸಾಲಾ ಪುಡಿಯನ್ನು ಹಾಕಿ ನಂತರ ಸ್ಮ್ಯಾಶ್ ಮಾಡಿಟ್ಟುಕೊಂಡ ಅಲೂಗಡ್ಡೆ ಶೇಂಗಾ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಬೇಕು.
 
ನಂತರ ಗೋಧಿ ಹಿಟ್ಟಿಗೆ 2 ಚಮಚ ಎಣ್ಣೆ, ಚಿಟಿಕೆ ಉಪ್ಪು, ಅರ್ಧ ಚಮಚ ಸಕ್ಕರೆಯನ್ನು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆತ್ತಗೆ ಕಲೆಸಿಕೊಳ್ಳಬೇಕು. ನಂತರ ಅರ್ಧ ಗಂಟೆಯ ನಂತರ ಪರೋಟಾವನ್ನು ಲಟ್ಟಿಸಿಕೊಳ್ಳಬೇಕು. ಈ ಪರೋಟಾವನ್ನು ಬಿಸಿ ಇದ್ದರೆ ತುಪ್ಪ ಹಾಕಿಕೊಂಡು ಮತ್ತು ತಣ್ಣಗಾದರೆ ಮೊಸರನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.  ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಡಿ ನೋಡಿ ಯುವತಿ ಮಾಡಿದ್ದೇನು ಗೊತ್ತಾ?

ಟಿವಿ ನೋಡೋಕೆ ಅಂತ ಆತನ ಮಗಳು ಬರುತ್ತಿದ್ದಳು. ಒಂದು ದಿನ ಅಶ್ಲೀಲ ಸಿಡಿ ನೋಡಿ ಅದರಲ್ಲಿರುವಂತೆ ಬಾಡಿಗೆದಾರನ ...

news

ಸಬ್ಬಕ್ಕಿ ಕುರುಕುರೆ

ಬಾಯಲ್ಲಿ ಕುರುಂ ಕುರುಂ ಎಂದು ಸದ್ದನ್ನುಂಟು ಮಾಡುವ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲಿಯೂ ...

news

ಸವತೆ ಬೀಜದ ಪಾಯಸ

ನಮ್ಮಲ್ಲಿ ಶುಭ ಸಮಾರಂಭಗಳಲ್ಲಿ ಪಾಯಸವನ್ನು ಮಾಡುವುದು ಅದರಲ್ಲಿಯೂ ಬಗೆಬಗೆಯ ನಾನಾ ವಿಧದ ಪಾಯಸಗಳನ್ನು ಮಾಡಿ ...

news

ಬೆಣ್ಣೆಯಿಂದ ರತಿಸುಖ ಫುಲ್ ಎಂಜಾಯ್ ಮಾಡಿ…!

ಅರೇ ಬೆಣ್ಣೆಗೂ ಸಮಾಗಕ್ಕೂ ಎತ್ತಣ ಸಂಬಂಧ ಎಂದು ಕೇಳ್ತೀರಾ?... ರತಿಸುಖ ಅನುಭವಿಸುವಾಗ ಕೆಲವೊಂದು ಟಿಪ್ಸ್ ...