ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ತುಂಡುಗಳನ್ನು ಹಾಕಿ ಮೇಲಿನಿಂದ ಮೊಸರು, ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲಾ ತುಂಡುಗಳು ಈ ಮಿಶ್ರಣದಿಂದ ಆವೃತವಾಗಬೇಕು. ಈ ಪಾತ್ರೆಯನ್ನು ಸುಮಾರು ಒಂದು ಗಂಟೆ ಕಾಲ ಮುಚ್ಚಿಡಿ.