ಅಂಟಿನ ಉಂಡೆ ಮಾಡುವ ವಿಧಾನ

ಬೆಂಗಳೂರು| pavithra| Last Modified ಮಂಗಳವಾರ, 11 ಆಗಸ್ಟ್ 2020 (08:57 IST)
ಬೆಂಗಳೂರು : ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಕೃಷ್ಣನಿಗೆ ನೈವೇದ್ಯಕ್ಕಾಗಿ ಅಂಟಿನ ಉಂಡೆ ತಯಾರಿಸಿ.
ಬೇಕಾಗುವ ಸಾಮಾಗ್ರಿಗಳು : ತುರಿದ ಒಣಕೊಬ್ಬರಿ, 1 ಹಿಡಿ ಬಾದಾಮಿ,1 ಕಪ್ ಖೇರ್ ಬೀಜ, 1 ಕಪ್ ಗೋಡಂಬಿ, ½ ಕಪ್ ದ್ರಾಕ್ಷಿ, 1 ಕಪ್ ತುಪ್ಪ, 1 ಕಪ್ ಬೆಲ್ಲ, 1 ಕಪ್ ಅಂಟು, ½ ಕಪ್ ಗಸೆಗಸೆ.> > ಮಾಡುವ ವಿಧಾನ : ಬಾದಾಮಿ, ಖೇರ್ ಬೀಜ, ಗೋಡಂಬಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಕೊಬ್ಬರಿ ತುರಿಯನ್ನು ಹುರಿದುಕೊಳ್ಳಿ. ಚಿಕ್ಕದಾಗಿ ಕಟ್ ಮಾಡಿಕೊಂಡ ಡ್ರೈಫ್ರೊಟ್ಸ್ ನ್ನು ತುಪ್ಪದಲ್ಲಿ ಹುರಿಯಿರಿ. ಅದಕ್ಕೆ ಅಂಟು ಹಾಕಿ ಹುರಿಯಿರಿ. ಬಳಿಕ ಬಾಣಲೆ ಬಿಸಿ ಮಾಡಿ ಅದಕ್ಕೆ ತುಪ್ಪ, ಹಾಕಿ ಬೆಲ್ಲ ಕರಗುವವರೆಗೂ ಕುದಿಸಿ. ಇವೆಲ್ಲವನ್ನು ಒಟ್ಟಾಗಿ ಸೇರಿಸಿ, ಗಸೆಗಸೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿದರೆ ಅಂಟಿನ ಉಂಡೆ ರೆಡಿ.


ಇದರಲ್ಲಿ ಇನ್ನಷ್ಟು ಓದಿ :