ಸೇಬು ಹಣ್ಣನ್ನು ಯಾರು ತಿಂದಿರುವುದಿಲ್ಲ ಹೇಳಿ.. ಪ್ರತಿದಿನ ಸೇಬನ್ನು ತಿನ್ನುವುದರಿಂದ ವೈದ್ಯರನ್ನೇ ದೂರವಿಡಬಹುದು ಎಂಬ ಮಾತಿದೆ. ಇದರಿಂದ ರುಚಿಯಾದ ಕೊಬ್ಬರಿ ಮಿಠಾಯಿಯನ್ನೂ ಸಹ ತಯಾರಿಸಬಹುದು. ಮತ್ತು ಸೇಬು ಹಣ್ಣಿನಿಂದ ತಯಾರಿಸಿದ ಮಿಠಾಯಿಯನ್ನು ತಿನ್ನುವಾಗ ಸೇಬಿನ ರಸ ಬರುವುದರಿಂದ ಮಕ್ಕಳಿಗೆ ಸಾಯಂಕಾಲದ ವೇಳೆಯಲ್ಲಿ ತಿನ್ನಲು ಕೊಡಬಹುದು. ಈ ಮಿಠಾಯಿ ಆರೋಗ್ಯಕ್ಕೂ ಒಳ್ಳೆಯದಪ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಅಂತ ತಿಳಿಸಿಕೊಡುತ್ತೇವೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.