ಸೇಬು ಹಣ್ಣಿನ ಪಾಯಸ

ಬೆಂಗಳೂರು, ಶುಕ್ರವಾರ, 2 ನವೆಂಬರ್ 2018 (16:46 IST)

ಬೇಕಾಗುವ ಸಾಮಗ್ರಿಗಳು :
 
* ಸೇಬು ಹಣ್ಣು 1/2 ಕೆಜಿ
* ಹಾಲು 1 ಲೀ.
* ಒಣ ಅಂಜೂರ 4 ರಿಂದ 5
* ಒಣ ದ್ರಾಕ್ಷಿ
* ತುಪ್ಪ 4 ಚಮಚ
* ಏಲಕ್ಕಿ ಪುಡಿ 1/4 ಚಮಚ
* ಸಕ್ಕರೆ ಒಂದೂವರೆ ಕಪ್
* ಚಿರೋಟಿ ರವೆ 2 ಚಮಚ
 
ತಯಾರಿಸುವ ವಿಧಾನ :
 
ಮೊದಲು ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಒಣ ದ್ರಾಕ್ಷಿಯನ್ನು ಹುರಿಯಬೇಕು. ನಂತರ ಅಂಜೂರವನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಒಂದು ಚಮಚ ತುಪ್ಪವನ್ನು ಒಂದು ಬಾಣಲೆಯಲ್ಲಿ ಹಾಕಿ ಸೇಬು ಹಣ್ಣನ್ನು ಬಾಡಿಸಿಕೊಳ್ಳಬೇಕು. ನಂತರ ಅರ್ಧ ಲೀಟರ್ ಹಾಲನ್ನು ಹಾಕಿ ಸೇಬು ಹಣ್ಣನ್ನು ಸೇರಿಸಿ ಕುದಿಸಬೇಕು. ಈ ಮಿಶ್ರಣವು ಚೆನ್ನಾಗಿ ಬೆಂದ ಮೇಲೆ ಉಳಿದ ಅರ್ಧ ಲೀಟರ್ ಹಾಲನ್ನು ಹಾಕಿ ಕುದಿಸಬೇಕು. ಹಾಲು ಕುದಿಯುವಾಗ ಹುರಿದ ಚಿರೋಟಿ ರವೆಯನ್ನು ಸೇರಿಸಬೇಕು. ನಂತರ ಹುರಿದ ದ್ರಾಕ್ಷಿ, ಅಂಜೂರ, ಏಲಕ್ಕಿ ಪುಡಿಯನ್ನು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಸವಿಯಲು ಸಿದ್ಧ. 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಿಕ್ಸ್‌ಡ್ ವೆಜಿಟೇಬಲ್ ಕುರ್ಮಾ

ವೆಜಿಟೇಬಲ್ ಕುರ್ಮಾವು ಚಪಾತಿಗೆ ಮತ್ತು ಪುರಿಗೆ ಒಳ್ಳೆಯ ಕಾಂಬಿನೇಶನ್. ಇದನ್ನು ಸುಲಭವಾಗಿ ಮನೆಯಲ್ಲಿಯೇ ...

news

ಅಸಿಡಿಟಿಗೆ ಪರಿಹಾರಗಳೇನು?

ಇತ್ತೀಚಿನ ವಿದ್ಯಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅಸಿಡಿಟಿ. ಈ ಅಸಿಡಿಟಿಯು ...

news

ಅವಲಕ್ಕಿ ಖಾರ ಪೋಂಗಲ್

ತಮಿಳುನಾಡಿನ ವಿಶೇಷ ತಿನಿಸುಗಳಲ್ಲಿ ಪೋಂಗಲ್ ಕೂಡಾ ಒಂದು ಎಂದು ಹೇಳಬಹುದು. ಅದರೆ ಅವಲಕ್ಕಿಯನ್ನೂ ಹಾಕಿ ಖಾರ ...

news

ಖೋವಾ ಮಿಕ್ಸ್ ಜಾಮೂನ್

ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ಸಿಹಿ ಪದಾರ್ಥವೆಂದರೆ ಜಾಮೂನು. ಜಾಮೂನನ್ನು ಸುಲಭವಾಗಿ ತಯಾರಿಸಿ ...