ಅವಲಕ್ಕಿ ಹಪ್ಪಳ ರುಚಿ ವಿಭಿನ್ನವಾಗಿದ್ದು, ಆಹಾರ ಪ್ರಿಯರಿಗೆ ಮತ್ತೊಂದು ಬೇರೆ ಥರದ ರುಚಿ ಬೇಕಾದರೆ ಮಾಡಿ ಸವಿಯಬಹುದು. ಏನೇನ್ ಬೇಕು? ಮೈದಾಹಿಟ್ಟು 100 ಗ್ರಾಮ್ ಅವಲಕ್ಕಿ 1 ಕಿಲೋ ಉಪ್ಪು ಎಣ್ಣೆಮಾಡೋದು ಹೇಗೆ?: ಅವಲಕ್ಕಿಯನ್ನು ತರಿಮಾಡಿಕೊಂಡು ಉಪ್ಪು, ಇಂಗು ಬೆರೆಸಿ ನೀರು ಸುರಿದು ಗಟ್ಟಿಯಾಗಿ ಕಲಸಿ ನೆನೆಸಿಡಿ. ನೆನೆದ ನಂತರ ರುಬ್ಬಿಕೊಂಡು ಮೈದಾ ಬೆರೆಸಬೇಕು. ಸಣ್ಣ ಉಂಡೆ ಮಾಡಿ ಲಟ್ಟಿಸಿ ನೆರಳಿಗೆ ಹಾಕಿದರೆ ಅವಲಕ್ಕಿ ಹಪ್ಪಳ ರೆಡಿ.