ಬಾಳೆ ಕಾಯಿ ಸಂಡಿಗೆ

ಬೆಂಗಳೂರು| Jagadeesh| Last Modified ಬುಧವಾರ, 17 ಜೂನ್ 2020 (16:50 IST)
ಬಾಳೆಕಾಯಿ ಸಂಡಿಗೆ ಆರೋಗ್ಯಕರ ಆಹಾರವೂ ಹೌದು. ಮನೆಯಲ್ಲೇ ಬಾಳೆ ಕಾಯಿ ಸಂಡಿಗೆ ತಯಾರಿಸಿ.

ಏನೇನು ಬೇಕು?

ಅಕ್ಕಿ ಕಾಲು ಕೆಜಿ
ಬಾಳೆಕಾಯಿ ಒಂದು ಡಜನ್
ಹಸಿಮೆಣಸಿನಕಾಯಿ 50 ಗ್ರಾಮ್
ಉಪ್ಪು
ಹುಳಿ ಮಜ್ಜಿಗೆ 1 ಕಪ್

ಮಾಡೋದು ಹೇಗೆ?

ಅಕ್ಕಿ ತೊಳೆದು ಅನ್ನ ಮಾಡಿಕೊಳ್ಳಿ. ಬಾಳೆಕಾಯಿ ಬೇಯಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಿ. ಬಾಳೆಕಾಯಿ ಆರಿದ ಮೇಲೆ ಅದನ್ನು ತುರಿದು ಅನ್ನಕ್ಕೆ ಸೇರಿಸಿ. ಉಪ್ಪು ಹಾಕಿ. ಹೆಚ್ಚಿದ ಮೆಣಸಿನಕಾಯಿ ಸೇರಿಸಿ. ಒರಳಿನಲ್ಲಿ ಎಲ್ಲವನ್ನೂ ಚೆನ್ನಾಗಿ ರುಬ್ಬುವುದು. ರುಬ್ಬಿದ ನಂತರ ಮಜ್ಜಿಗೆ ಹಾಕಿ ಕಲಸಿ. 10 ಗಂಟೆ ಬಿಟ್ಟು ನಂತರ ಸಂಡಿಗೆ ಇಟ್ಟು ಬಿಸಿಲಿನಲ್ಲಿ ಒಣಗಿಸಿ.

 
ಇದರಲ್ಲಿ ಇನ್ನಷ್ಟು ಓದಿ :