ಬೇಸಿಗೆಯ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಕು ಎಂದು ಅನ್ನಿಸುವುದಿಲ್ಲ. ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಒಂದು ದುಸ್ಸಾಹಸವೇ ಸರಿ. ಬೆವರಿನಿಂದ ದೇಹ ನಿರ್ಜಲೀಕರಣವಾಗುವ ಸಂಭವವೂ ಹೆಚ್ಚು. ಆದರೆ ಮೊಸರನ್ನು ಹಾಗೆಯೇ ತಿನ್ನಲು ಕೆಲವರು ಇಷ್ಟಪಡುವುದಿಲ್ಲ. ಅಂತಹ ಸಂದರ್ಭದಲ್ಲಿ ಮೊಸರಿನಿಂದ ನಾನಾ ತರಹದ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಸವಿಯಬಹುದು. ಏನೆಲ್ಲಾ ಆಹಾರ ಪದಾರ್ಥಗಳನ್ನು ಮಾಡಿ ಸವಿಯಬಹುದು ಎಂದು ನೋಡಿ...