ಬೇಕಾಗುವ ಸಾಮಗ್ರಿಗಳು 1 ಕಪ್ ಹೆಸರು ಬೆಳೆ 1/2 ಕಪ್ ಸಕ್ಕರೆ 1/4 ಕಪ್ ತುಪ್ಪ 8-10 ಗೋಡಂಬಿ ಮಾಡುವ ವಿಧಾನ * ಒಂದು ಚಮಚ ತುಪ್ಪದಲ್ಲಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. * ದಪ್ಪತಳದ ಪಾತ್ರೆಯಲ್ಲಿ ಹೆಸರು ಬೆಳೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದಿಟ್ಟುಕೊಳ್ಳಿ. * ಹುರಿದ ಹೆಸರು ಬೆಳೆಯನ್ನು ತಣ್ಣಗಾಗಿಸಿ, ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ.