ಬೆಂಡೆಕಾಯಿ ಕಾಯಿರಸ

ಬೆಂಗಳೂರು, ಮಂಗಳವಾರ, 30 ಅಕ್ಟೋಬರ್ 2018 (18:12 IST)


ಬೇಕಾಗುವ ಸಾಮಗ್ರಿಗಳು :
 
* 1/4 ಕಿಲೋ ಬೆಂಡೆಕಾಯಿ
* ತೆಂಗಿನಕಾಯಿ ತುರಿ 1 ಕಪ್
* ಹಸಿಮೆಣಸಿನಕಾಯಿ 5 ರಿಂದ 6
* ಉದ್ದಿನಬೇಳೆ 2 ಟೀ ಚಮಚ
* ಜೀರಿಗೆ 1 ಟೀ ಚಮಚ
* ಎಣ್ಣೆ ಸ್ವಲ್ಪ
* ಅರಿಶಿನ ಅರ್ಧ ಟೀ ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ನಿಂಬೆಹಣ್ಣು 1
 
ಒಗ್ಗರಣೆಗೆ
 
* ತುಪ್ಪ 1 ಟೀ ಚಮಚ
* ಸಾಸಿವೆ 1 ಟೀ ಚಮಚ
* ಕರಿಬೇವು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
 
ತಯಾರಿಸುವ ವಿಧಾನ :
 
 ಮೊದಲಿಗೆ ಬೆಂಡೆಕಾಯಿಯನ್ನು ಒಂದೇ ಅಳತೆಯಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಬೆಂಡೆಕಾಯಿ, ಅರಿಶಿನ ಮತ್ತು 4 ಟೀ ಚಮಚ ಎಣ್ಣೆಯನ್ನು ಹಾಕಿ ಲೋಳೆ ಹೋಗುವವರಿಗೆ ಚೆನ್ನಾಗಿ ಹುರಿಯಬೇಕು. ನಂತರ ಉದ್ದಿನಬೇಳೆ, ಜೀರಿಗೆ, ಹಸಿಮೆಣಸಿನಕಾಯಿ ಮತ್ತು 1 ಟೀ ಚಮಚ ಎಣ್ಣೆಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಜೊತೆಗೆ ತೆಂಗಿನತುರಿ, ಉಪ್ಪು, ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಹುರಿದುಕೊಂಡ ಬೆಂಡೆಕಾಯಿ ಮತ್ತು ರುಬ್ಬಿಕೊಂಡ ಪದಾರ್ಥಗಳನ್ನು ಮಿಶ್ರಣ ಮಾಡಬೇಕು. ಅದು ತುಂಬಾ ಗಟ್ಟಿಯಾಗಿಯೂ ಅಥವಾ ತೆಳ್ಳಗೆ ಸಹ ಇರಬಾರದು. ಇದಕ್ಕೆ ನಿಂಬೆರಸ ಸೇರಿಸಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಒಗ್ಗರಣೆಯನ್ನು ಹಾಕಿ ಜೊತೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಕಾಯಿರಸ ಸವಿಯಲು ಸಿದ್ಧ. ಇದನ್ನು ಅನ್ನದೊಂದಿಗೆ ಸವಿದರೆ ರುಚಿಯಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತುಪ್ಪದ ಮೈಸೂರ್‌ಪಾಕ್

ಸಿಹಿ ತಿಂಡಿಯನ್ನು ಇಷ್ಟಪಡುವವರು ಮೈಸೂರ್‌ಪಾಕ್ ಅನ್ನು ಇಷ್ಟಪಟ್ಟೇ ಪಡುತ್ತಾರೆ. ಅದರೆ ಅಂಗಡಿಗಳಿಂದ ತಂದು ...

news

ಸೌತೆಕಾಯಿಯ ಪಾಯಸವನ್ನು ತಯಾರಿಸುವುದು ಹೇಗೆ ಗೊತ್ತಾ?

ಒಂದು ದಪ್ಪ ತಳದ ಪಾತ್ರಯಲ್ಲಿ ನೆನೆಸಿದ ಸಬ್ಬಕ್ಕಿ ಮತ್ತು ಸೌತೆಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ನೀರು ...

news

ಪನೀರ್ ತವಾ ಮಸಾಲಾ ಮಾಡಿ ನೋಡಿ..!!

ಇದೊಂದು ಸರಳವಾದ ರೆಸಿಪಿಯಾಗಿದ್ದು ಸುಲಭವಾಗಿ ನೀವೇ ಮಾಡಿಕೊಳ್ಳಬಹುದಾಗಿದೆ. ಇದೊಂದು ಶೀಘ್ರವಾಗಿ ...

news

ಈ ಆಹಾರ ಸೇವಿಸಿದ ಮೇಲೆ ಸೆಕ್ಸ್ ಮಾಡಿದರೆ ಆಗುವ ಮ್ಯಾಜಿಕ್ಕೇ ಬೇರೆ!

ಬೆಂಗಳೂರು: ಸೆಕ್ಸ್ ಗೂ ಆಹಾರಕ್ಕೂ ಹತ್ತಿರದ ಸಂಬಂಧವಿದೆ. ನಾವು ಸೇವಿಸುವ ಆಹಾರ ನಮ್ಮ ಲೈಂಗಿಕ ಜೀವನವನ್ನು ...