ನೀವು ಶೀಘ್ರವಾಗಿ ಮತ್ತು ಕೆಲವೇ ಸಾಮಗ್ರಿಗಳೊಂದಿಗೆ ಮಾಡಬಹುದಾದ ಸಿಹಿ ಖರ್ಜೂರದ ಲಡ್ಡು. ಖರ್ಜೂರ ಆರೋಗ್ಯಕರವಾಗಿ ದೇಹದ ತೂಕವನ್ನು ಹೆಚ್ಚಿಸುತ್ತದೆ ಮತ್ತು ಇದು ಹಲವಾರು ವ್ಯಾಧಿಗಳನ್ನು ತಡೆಯುತ್ತದೆ. ಇದು ಕ್ಯಾಲ್ಶಿಯಂ, ಪೊಟಾಶಿಯಂ ಮತ್ತು ಸಲ್ಫರ್ ಸೇರಿದಂತೆ ಅನೇಕ ಅಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದುದಾಗಿದೆ. ನಾವು ಖರ್ಜೂರದ ಲಡ್ಡುವಿನಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾಗಳನ್ನು ಸೇರಿಸುವುದರಿಂದ ಅದು ಆರೋಗ್ಯಕ್ಕೆ ಬಹಳ ಉತ್ತಮವಾದುದು ಹಾಗೂ ಚಿಕ್ಕ ಮಕ್ಕಳಿಗೆ ಚಾಕಲೇಟ್ಗಳ ಬದಲು ಬಹಳ ಸೂಕ್ತವಾದ ತಿಂಡಿ.