ಪತ್ರೊಡೆ ಅಥವಾ ಪತ್ರವಡೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅದರಲ್ಲೂ ಉಡುಪಿ, ಮಂಗಳೂರು ಮತ್ತು ಮಲೆನಾಡಿನ ಕಡೆ ಬಹಳ ಪ್ರಸಿದ್ಧವಾಗಿರುವ ತಿನಿಸು. ಇದನ್ನು ಮಾಡುವ ವಿಧಾನವು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಬದಲಾವಣೆಯಿದೆ. ಇದೊಂದು ಸಾಂಪ್ರದಾಯಿಕ ತಿನಿಸಾಗಿದ್ದು ಪತ್ರೊಡೆಯನ್ನು ಅಕ್ಕಿ ಮತ್ತು ಕೆಸುವಿನ ಎಲೆಯನ್ನು ಬಳಸಿ ಮಾಡುತ್ತಾರೆ ಮತ್ತು ಇದು ತುಂಬಾ ರುಚಿಯಾಗಿರುತ್ತದೆ. ಕೆಸುವಿನ ಎಲೆಯಲ್ಲಿ ತುಂಬಾ ತುರಿಕೆಯ ಅಂಶವಿರುವುದರಿಂದ ಎಲ್ಲಾ ರೀತಿಯ ಕೆಸುವಿನ ಎಲೆಗಳು ಸೂಕ್ತವಲ್ಲ. ಕಪ್ಪು ಕೆಸುವಿನ ಎಲೆ ಮತ್ತು