ಸ್ವಾದಿಷ್ಠ ತೇಂಗೊಳಲು

ಬೆಂಗಳೂರು, ಗುರುವಾರ, 28 ಮಾರ್ಚ್ 2019 (17:14 IST)

ಮಾಡುವ ವಿಧಾನ:-
ದೋಸೆ/ತಿಂಡಿ ಅಕ್ಕಿ - 4 ಪಾವು
ಉದ್ದಿನ ಬೇಳೆ - 2 ಪಾವು
 
ತೇಂಗೊಳಲು ಮಾಡಲು:-
ಬೆಣ್ಣೆ - 2 ಚಮಚ
ಬಿಳಿ ಎಳ್ಳು - 3 ಚಮಚ
ಜೀರಿಗೆ - 2 ಚಮಚ
ಇಂಗು - 1 ಚಮಚ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು
 
ಅಕ್ಕಿಯನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದು, ಸೋಸಿ, ಒಣ ಬಟ್ಟೆಯ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ.
 
ಉದ್ದಿನ ಬೇಳೆಯನ್ನು ಒಣ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅಥವಾ ಅದನ್ನೂ ಕೂಡ ತೊಳೆದು ಬಟ್ಟೆಯ ಮೇಲೆ ನೆರಳಿನಲ್ಲಿ ಪೂರ್ತಿ ಒಣಗಿಸಿಡಿ. ನಂತರ ಬಾಣಲೆಯಲ್ಲಿ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಉಗುರು ಬೆಚ್ಚಗೆ ಹುರಿಯಬೇಕು, ಉದ್ದಿನ ಬೇಳೆಯನ್ನೂ ಸಹ ಸಂಪಿಗೆ ಬಣ್ಣಕ್ಕೆ ಸ್ವಲ್ಪ ಹುರಿಯಬೇಕು. ನಂತರ ಎರಡೂ ಸೇರಿಸಿ ಫ್ಲೋರ್ ಮಿಲ್‌ನಲ್ಲಿ ನುಣ್ಣಗೆ ಹಿಟ್ಟು ಮಾಡಿಸಿಡಿ.
 
ತೇಂಗೊಳಲು ಮಾಡಲು, 2 ಚಮಚ ತಣ್ಣನೆ ಬೆಣ್ಣೆಯನ್ನು ಚೆನ್ನಾಗಿ ಕೌಯಿಂದ ಕಿವುಚಿ, 1 ಪಾವು ಹಿಟ್ಟಿಗೆ ಸೇರಿಸಿ, ಎಳ್ಳು, ಜೀರಿಗೆ, ಉಪ್ಪು, ಇಂಗು ಸೇರಿಸಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿಡಿ. ಚಕ್ಕುಲಿ ಒರಳಿನಲ್ಲಿ ತೇಂಗೊಳಲು ಬಿಲ್ಲೆ ಹಾಕಿ, (ಬಿಲ್ಲೆ ಫೋಟೋ ಹಾಕಿದ್ದೇನೆ, ಮೂರು ರಂಧ್ರಗಳಿರುತ್ತೆ) ತೇಂಗೊಳಲು ಗುಂಡಗೆ ಒತ್ತಿ, ತುದಿಗಳನ್ನು ಸೇರಿಸಿ, ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಸಿಲಿನ ಬೇಗೆ ತಣಿಸುವ ತಂಪು ತಂಪಾದ ಹಣ್ಣಿನ ಜ್ಯೂಸ್‌ಗಳು

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಕು ಎಂದೆನಿಸದೇ ಇರುವ ಕಾಲವದು. ದೇಹವು ...

news

ಮೊದಲನೆಯ ರಾತ್ರಿ ಅದ್ಭುತ ರೊಮ್ಯಾನ್ಸ್ ಮಾಡಲು ಏನು ಮಾಡಬೇಕು?

ಬೆಂಗಳೂರು: ಮೊದಲನೆಯ ರಾತ್ರಿ ಎನ್ನುವ ಪದ ಎಲ್ಲಾ ವಿವಾಹಿತ ಜೋಡಿಗಳ ಮೈ ರೋಮಾಂಚನಗೊಳಿಸುವ ರಾತ್ರಿ. ಆದರೆ ಆ ...

news

ಮುಟ್ಟಿನ ಸಮಯದಲ್ಲಿ ಗುಪ್ತಾಂಗದಲ್ಲಿ ವಿಪರೀತ ನೋವು ಉಪಶಮನಕ್ಕೆ ಹೀಗೆ ಮಾಡಿ

ಬೆಂಗಳೂರು: ಮುಟ್ಟಿನ ಸಮಯದಲ್ಲಿ ಕೈ ಕಾಲು ಸೆಳೆತ, ಹೊಟ್ಟೆ ನೋವು ಇತ್ಯಾದಿ ಸ್ತ್ರೀಯರಲ್ಲಿ ಕಂಡುಬರುವುದು ...

news

ಬೆಲ್ಲದಲ್ಲೂ ಅಡಗಿದೆ ಸೌಂದರ್ಯದ ಗುಟ್ಟು

ಬೆಂಗಳೂರು : ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಅದೇರೀತಿ ಈ ಬೆಲ್ಲದಿಂದ ...