ಬೆಂಗಳೂರು: ಚಳಿಗಾಲದಲ್ಲಿ ವಾತಾವರಣದಲ್ಲಿ ಕಡಿಮೆ ತಾಪಮಾನ ಇರುವುದರಿಂದ ಮಾನವ ಶರೀರದ ಮೇಲೆ ಪರಿಣಾಮ ಬೀರುತ್ತದೆ. ವಿಪರೀತ ತಂಪಾದ ತಾಪಮಾನದಿಂದಾಗಿ ಶೀತ, ಕೆಮ್ಮವಿನಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಚಳಿಗಾಲದಲ್ಲಿ ಬೆಚ್ಚಗೆ ಹಾಗೂ ಆರೋಗ್ಯವಾಗಿರಲು ಇಲ್ಲಿದೆ ಒಂದಿಷ್ಟು ತಿನಿಸುಗಳ ಪಟ್ಟಿ. ನೀವೊಮ್ಮೆ ಪ್ರಯತ್ನಿಸಿ ನೋಡಿ. ಎಳ್ಳಿನ ಉಂಡೆ: ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡಿದ ಉಂಡೆಯನ್ನು ಸೇವಿಸಿ. ಇವೆರೆಡೂ ದೇಹದಲ್ಲಿ ಉಷ್ಣತೆಯ ಅಂಶವನ್ನು ಹೆಚ್ಚಿಸುತ್ತದೆ. ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ ಜಾಸ್ತಿ ಇರುತ್ತದೆ.