ಗೋಧಿಹಿಟ್ಟಿನಿಂದ ಕುಲ್ಫಿ ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು| pavithra| Last Modified ಮಂಗಳವಾರ, 26 ಮೇ 2020 (08:32 IST)
ಬೆಂಗಳೂರು : ಗೋಧಿ ಹಿಟ್ಟನ್ನು ಚೆನ್ನಾಗಿ ಚಪಾತಿ ಮಾಡಲು ಅಥವಾ ಬೇರೆ ಬೇರೆ ವಿಧದ ತಿಂಡಿಗಳನ್ನು ಮಾಡಲು ಬಳಸುತ್ತಾರೆ. ಹಾಗೇ ಇದರಿಂದ ಕುಲ್ಫಿಯನ್ನು ಕೂಡ ತಯಾರಿಸಬಹುದು.


ಗೋಧಿಹಿಟ್ಟಿನ ಕುಲ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು: ½ ಲೀಟರ್ ಹಾಲು, ½ ಕಪ್ ಸಕ್ಕರೆ , 1  ಟೇಬಲ್ ಗೋಧಿಹಿಟ್ಟು, 1 ಚಿಟಿಕೆ ಕೇಸರಿ.

ಮಾಡುವ ವಿಧಾನ: ಹಾಲಿಗೆ ಸಕ್ಕರೆ ಬೆರೆಸಿ ಕಾಯಿಸಿ ಅದಕ್ಕೆ 2 ಟೇಬಲ್ ಚಮಚ ನೀರಿಗೆ ಗೋಧಿಹಿಟ್ಟು ಮಿಕ್ಸ್ ಮಾಡಿ ಆ ಹಾಲಿಗೆ ಹಾಕಿ ಕೈಯಾಡಿಸುತ್ತಿರಿ. ಕೇಸರಿ ಹಾಕಿ ಗಟ್ಟಿಯಾಗುತ್ತಿದ್ದಂತೆ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಕುಲ್ಫಿ ಮಾಲ್ಡ್ ಗೆ ಹಾಕಿ ಫ್ರಿಜರ್ ನಲ್ಲಿಡಿ. ರಾತ್ರಿಯಿಡಿ ಇಟ್ಟು ಬೆಳಿಗ್ಗೆ ತೆಗೆದರೆ ಗೋಧಿಹಿಟ್ಟಿನ ಕುಲ್ಫಿ ರೆಡಿ.ಇದರಲ್ಲಿ ಇನ್ನಷ್ಟು ಓದಿ :