ಎಳ್ಳಿನಿಂದ ಸಿಹಿಯಾದ ಹೋಳಿಗೆ ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು| pavithra| Last Updated: ಗುರುವಾರ, 16 ಜುಲೈ 2020 (13:02 IST)

ಬೆಂಗಳೂರು : ಹೋಳಿಗೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದಕಾರಣ ಎಳ್ಳಿನಿಂದ ಸಿಹಿಯಾದ ಹೋಳಿಗೆ ತಯಾರಿಸಿ ತಿನ್ನಿ.

ಬೇಕಾಗುವ ಸಾಮಾಗ್ರಿಗಳು : ಎಳ್ಳು 1 ಕಪ್, ಒಣ ಕೊಬ್ಬರಿ ತುರಿ ½ ಕಪ್, ಬೆಲ್ಲದ ಪುಡಿ 1 ಕಪ್, ಏಲಕ್ಕಿ 4, ಗಸೆಗಸೆ 1 ಚಮಚ, ಚಿರೋಟಿ ರವಾ ½ ಕಪ್, ಗೋದಿ ಹಿಟ್ಟು 1 ಕಪ್, ಮೈದಾ ಹಿಟ್ಟು ¼ ಕಪ್, ಎಣ್ಣೆ 2 ಚಮಚ.

ಮಾಡುವ ವಿಧಾನ : ಗೋದಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವಾ , ಎಣ್ಣೆ, ನೀರು, ಉಪ್ಪು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ. ಬಳಿಕ ಎಳ್ಳು, ಕೊಬ್ಬರಿ ತುರಿ, ಗಸೆಗಸೆಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ, ಬಿಸಿ ಮಾಡಿ ಕರಗಿಸಿ. ಅದಕ್ಕೆ ಹುರಿದುಕೊಂಡ ಎಳ್ಳು, ಕೊಬ್ಬರಿ ತುರಿ, ಗಸೆಗಸೆ, ಏಲಕ್ಕಿ ಪುಡಿ ಮಾಡಿ ಸೇರಿಸಿ ಹೂರಣ ತಯಾರಿಸಿಕೊಳ್ಳಿ. ಬಳಿಕ ಹಿಟ್ಟು ಮತ್ತು ಹೂರಣದಿಂದ ಹೋಳಿಗೆ ತಯಾರಿಸಿ ತವಾ ಮೇಲಿಟ್ಟು ಕಾಯಿಸಿದರೆ ಎಳ್ಳು ಹೋಳಿಗೆ ರೆಡಿ. 

 
ಇದರಲ್ಲಿ ಇನ್ನಷ್ಟು ಓದಿ :