ದೊಡ್ಡಪತ್ರೆ ಎಲೆಯ ತಂಬುಳಿ

ಬೆಂಗಳೂರು, ಗುರುವಾರ, 21 ಮಾರ್ಚ್ 2019 (19:51 IST)

ಇದು ತಂಪಿನ ಗುಣವುಳ್ಳದ್ದು, ಜ್ವರ ಹಾಗೂ ವಾತರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹೊಟ್ಟೆ ಉಬ್ಬರ, ಹೊಟ್ಟೆಮುರಿತ ನಿವಾರಣೆಯಾಗುವುದು ಮತ್ತು ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಬೇಕಾಗುವ ಪದಾರ್ಥಗಳು:
 
15-20 ದೊಡ್ಡಪತ್ರೆ ಎಲೆಗಳು
ಅರ್ಧ ಟೀಸ್ಪೂನ್ ಜೀರಿಗೆ
ಅರ್ಧ ಟೀಸ್ಪೂನ್ ಕಾಳು ಮೆಣಸು
ಅರ್ಧ ಕಪ್ ತೆಂಗಿನತುರಿ
1 ಕಪ್ ಮೊಸರು
1 ಅಥವಾ 2 ಒಣಮೆಣಸಿನಕಾಯಿ
2 ಟೀಸ್ಪೂನ್ ಅಡುಗೆ ಎಣ್ಣೆ
ಕಾಲು ಟೀಸ್ಪೂನ್ ಸಾಸಿವೆ
ಉಪ್ಪು ರುಚಿಗೆ ತಕ್ಕಷ್ಟು
 
ತಂಬುಳಿ ಮಾಡವ ವಿಧಾನ:
 
ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಿಸಿ, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ. ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ. ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ರುಬ್ಬಿರಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ, ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಹಾಕಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆಚ್ಚು ಲೈಂಗಿಕ ಸುಖ ಪಡೆಯಲು ಮಹಿಳೆಯರು ಹೀಗಿರಲೇಬೇಕಾ?!

ಬೆಂಗಳೂರು: ಲೈಂಗಿಕ ಸುಖ ಹೆಚ್ಚು ಸಿಗಬೇಕೆಂದರೆ ಮಹಿಳೆಯರ ದೇಹ ಸೌಂದರ್ಯವೇ ಮುಖ್ಯವೇ? ತಮ್ಮ ದೇಹ ಸೌಂದರ್ಯದ ...

news

ಅತ್ತಿಗೆಯನ್ನು ಬುಟ್ಟಿಗೆ ಹಾಕಿಕೊಳ್ಳೋದು ಹೇಗೆ?!

ಬೆಂಗಳೂರು: ಮದುವೆಯಾದ ಬಳಿಕ ಅತ್ತೆಯನ್ನು ಇಂಪ್ರೆಸ್ ಮಾಡುವಷ್ಟೇ ಗಂಡನ ಸಹೋದರಿಯನ್ನೂ ಬುಟ್ಟಿಗೆ ...

news

ಪೋರ್ನ್ ಸೈಟ್ ನೋಡುವ ಗಂಡನಿಗೆ ಕಡಿವಾಣ ಹಾಕುವುದು ಹೇಗೆ?

ಬೆಂಗಳೂರು: ಮದುವೆಯಾಗಿ ಕೆಲವು ವರ್ಷಗಳಾದ ಮೇಲೆ ಪತ್ನಿ ಮೇಲೆ ಆಕರ್ಷಣೆ ಕಡಿಮೆಯಾಗಿ ಲೈಂಗಿಕ ತೃಪ್ತಿಗೆ ...

news

ತೂಕ ಇಳಿಸಲು ಸಹಕಾರಿಯಾಗಿವೆ ಈ ಜ್ಯೂಸ್ ಗಳು

ಬೆಂಗಳೂರು : ಅತಿಯಾಗಿ ತಿನ್ನವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಕೆಲವರು ಚಿಂತೆಗೆ ಒಳಗಾಗುತ್ತಾರೆ. ...