ಬೆಂಗಳೂರು: ನುಗ್ಗೆಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ಸಿಗುತ್ತವೆ. ಇದರಿಂದ ವಿವಿಧ ಬಗೆಯ ಅಡುಗೆಗಳನ್ನು ಮಾಡಬಹುದು. ಮೊಸರು ಬಜ್ಜಿಯ ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳು: ನುಗ್ಗೆಯ ಕುಡಿ, ಕಾಯಿತುರಿ, ಮೊಸರು, ಈರುಳ್ಳಿ, ಒಗ್ಗರಣೆಗೆ ಕೆಂಪು ಮೆಣಸು, ಹಸಿಮೆಣಸು, ಉದ್ದಿನಬೇಳೆ, ಸಾಸಿವೆ, ಎಣ್ಣೆ. ರುಚಿಗೆ ಉಪ್ಪು, ಬೆಲ್ಲ ಬೇಕಾದರೆ. ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ, ಕೆಂಪು ಮೆಣಸಿನ ಚೂರು, ಹಸಿಮೆಣಸಿನ ಚೂರು, ಸಾಸಿವೆ