ಬೇಕಾಗುವ ಸಾಮಗ್ರಿಗಳು: ಮೆಂತ್ಯ 2 ಚಮಚ, ಉದ್ದಿನಬೇಳೆ 1 ಚಮಚ ಒಣಮೆಣಸಿನಕಾಯಿ 5-6 ಬೆಲ್ಲ ಸ್ವಲ್ಪ, ಹುಣಸೇರಸ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು ತೆಂಗಿನತುರಿ 1 ಕಪ್ ಒಗ್ಗರಣೆಗೆ: ಕರಿಬೇವು, ಜೀರಿಗೆ, ಸಾಸಿವೆ, ಒಣಮೆಣಸಿನಕಾಯಿ. ಮಾಡುವ ವಿಧಾನ: ಮೊದಲು ಮೆಂತ್ಯವನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಬೇಕು. ಆನಂತರ, ಉದ್ದಿನಬೇಳೆ, ಒಣಮೆಣಸಿನಕಾಯಿಯನ್ನು ಹುರಿದುಕೊಂಡು, ತೆಂಗಿನತುರಿಯೊಂದಿಗೆ ರುಬ್ಬಿಕೊಳ್ಳಬೇಕು. ಆನಂತರ, ಬಾಣಲೆಯಲ್ಲಿ ಹಾಕಿ, ಒಗ್ಗರಣೆ ಹಾಕಿಕೊಂಡು, ಹುಣಸೇರಸ ಮತ್ತು ಬೆಲ್ಲವನ್ನು ಹಾಕಿ,