ನೀವು ಗೋರಿಕಾಯಿ ಬಾಳಕ ತಿಂದಿಲ್ಲದಿದ್ದರೆ ಈಗಲೇ ಮನೆಯಲ್ಲಿ ಮಾಡಿನೋಡಿ. ಏನೇನು ಬೇಕು?ಗೋರಿಕಾಯಿ 1 ಕೆಜಿ ಮೊಸರು ಉಪ್ಪುಮಾಡುವುದು ಹೇಗೆ?ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು ಹಾಕಿ ಬೆರೆಸಿ, ಆ ನಂತರ ಗೋರಿಕಾಯಿ ನೀರಿನಲ್ಲಿ ತೊಳೆದು ಎರಡು ತುಂಡು ಮಾಡಿ ಮೊಸರಿನಲ್ಲಿ ನೆನೆ ಹಾಕಿದ ನಂತರ ತಟ್ಟೆ ಮುಚ್ಚಿಡಿ. ಎರಡು ದಿನ ನೆಂದ ಮೇಲೆ ಮೊಸರಿನಿಂದ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಮೇಲೆ ಡಬ್ಬಿಯಲ್ಲಿ ಮುಚ್ಚಿಡಿ. ಬೇಕಾದಾಗ ಎಣ್ಣೆಯಲ್ಲಿ ಕರೆದು ತಿನ್ನಬಹುದು.