ಉಡುಪಿ: ಸಂಸಾರದ ತಾಪತ್ರಯಗಳಿಗೆ ಹೆಗಲುಕೊಟ್ಟು ದೂರದ ಊರಿನಲ್ಲಿ ಕೆಲಸ ಮಾಡಿಕೊಂಡು ಇರುವ ಹುಡುಗರಿಗೆ ಅಡುಗೆ ಮಾಡುವುದೇ ದೊಡ್ಡ ತಲೆಬಿಸಿ. ಸಂಸಾರಸ್ಥರಾದರೆ ಹೆಂಡತಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಾಳೆ ತಿಂದುಂಡು ಮಲಗಿದರೆ ಮುಗಿಯಿತು. ಆದರೆ ಇನ್ನು ಮದುವೆಯಾಗದೇ ಇರುವ ಹುಡುಗರ ಪರಿಸ್ಥಿತಿ ತುಸು ಕಷ್ಟ ಎನ್ನಬಹುದು. ಎರಡಂಕಿ ಸಂಬಳ ಪಡೆದುಕೊಂಡು ಹೋಟೆಲ್ ನಲ್ಲಿ ಊಟ ಮಾಡಿಕೊಂಡು ಆಮೇಲೆ ಸಾಲ ಮಾಡಿಕೊಂಡು ತಲೆ ಕೆಡಿಸಿಕೊಳ್ಳುವ ಹುಡುಗರೇ ಇರುವಾಗ ಉಡುಪಿ ಜಿಲ್ಲೆಯ ಯಡ್ತಾಡಿ ಗ್ರಾಮದ